Select Your Language

Notifications

webdunia
webdunia
webdunia
webdunia

ಡೈವೋರ್ಸ್ ಕೇಸ್ ವಾಪಸ್ ಪಡೆದ ಸುದೀಪ್, ಪ್ರಿಯಾ ದಂಪತಿ

ಡೈವೋರ್ಸ್ ಕೇಸ್ ವಾಪಸ್ ಪಡೆದ ಸುದೀಪ್, ಪ್ರಿಯಾ ದಂಪತಿ
ಬೆಂಗಳೂರು , ಗುರುವಾರ, 24 ಆಗಸ್ಟ್ 2017 (11:52 IST)
ಕನ್ನಡದ ಖ್ಯಾತ ನಟ ಸುದೀಪ್ ಮತ್ತು ಪ್ರಿಯಾ ದಂಪತಿ ವಿಚ್ಛೇದನಾ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸುದೀಪ್ ದಂಪತಿ ಈಗ ಅರ್ಜಿ ಹಿಂಪಡೆದಿದ್ದಾರೆ.

2015ರಲ್ಲಿ ಸುದೀಪ್ ದಂಪತಿ ನಡುವೆ ಮನಸ್ತಾಪ ಬಂದಿದ್ದರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.  ಆ ಬಳಿಕ ಹಲವು ಬಾರಿ ನಡೆದ ವಿಚಾರಣೆಗೆ ಸುದೀಪ್ ದಂಪತಿ ಹಾಜರಾಗಿರಲಿಲ್ಲ. ನೋಟಿಸ್ ನೀಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ವಿಚ್ಛೇದನದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೌಟುಂಬಿಕ ತಿಳಿಸಿತ್ತು. ಇದೀಗ, ನಾವಿಬ್ಬರೂ ಒಂದಾಗಿದ್ದೇವೆ ಎಂದು ಕೌಟುಂಬಿಕ ಕೋರ್ಟ್ ಮುಂದೆ ದಂಪತಿ ತಿಳಿಸಿದ್ದು, ನ್ಯಾಯಾಧೀಶರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

ಹೈಸ್ಕೂಲ್`ನಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳ ಭವಿಷ್ಯದ ದೃಷ್ಟಿಯಿಂದ ಸುದೀಪ್ ದಂಪತಿ ಒಂದಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಯೂ ಕೆಲ ಕಾರ್ಯಕ್ರಮಗಳಲ್ಲಿ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಸುದೀಪ್ ದಂಪತಿ ಮತ್ತೆ ಒಂದಾಗುವ ಸೂಚನೆ ಸಿಕ್ಕಿತ್ತು. ಇದೀಗ, ಗೌರಿಹಬ್ಬದ ದಿನದಂದೇ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸುದೀಪ್ ದಂಪತಿ ವಿಚ್ಛೇದನಾ ಅರ್ಜಿ ಹಿಂಪಡೆದಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.  ಈ ನಿರ್ಧಾರದ ಮೂಲಕ ಸುದೀಪ್ ಸಮಾಜಕ್ಕೆ ಮಾದರಿ ಎನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಗೆ ಎಷ್ಟು ಭಾಷಾ ಪ್ರವೀಣ ಗೊತ್ತಾ?