Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಖ್ಯಾತ ನಟಿ ಪ್ರಿಯಾಮಣಿ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಖ್ಯಾತ ನಟಿ ಪ್ರಿಯಾಮಣಿ
ಬೆಂಗಳೂರು , ಬುಧವಾರ, 23 ಆಗಸ್ಟ್ 2017 (15:29 IST)
ಬಹುಭಾಷಾ ನಟಿ ಪ್ರಿಯಾಮಣಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಜಯನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಿಯಾಮಣಿ, ಮುಂಬೈನ ಉದ್ಯಮಿ ಮುಸ್ತಫಾ ರಾಜಾ ಜೊತೆ ಸರಳವಾಗಿ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಾರೆ.

ಇತ್ತೀಚಿಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಮಣಿ ಮತ್ತು ಮುಸ್ತಫಾ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪ್ರಿಯಾಮಣಿ ತಂದೆ ವಾಸುದೇವ್ ಅಯ್ಯರ್ ಮಣಿ ಜೊತೆ ಆಗಮಿಸಿ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಾರೆ. ಸಿಸಿಎಲ್ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮುಸ್ತಫಾ ರಾಜಾ ಮುಂಬೈನ ಉದ್ಯಮಿಯಾಗಿದ್ಧಾರೆ.

ನಾಳೆ ಬೆಂಗಳೂರಿನ ಕೊತ್ತನೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಬಂಧು ಬಾಂಧವರು ಸೇರಿದಂತೆ ದಕ್ಷಿಣ ಭಾರತದ ಸಿನಿತಾರೆಯರು ಭಾಗವಹಿಸುವ ಸಾಧ್ಯತೆ ಇದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳ ಚಿತ್ರಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ತನ್ನಡ, ತೆಲುಗು, ತಮಿಳಿನ ರಿಯಾಲಿಟಿ ಶೋಗಳಲ್ಲೂ ಪ್ರಿಯಾಮಣಿ ಕಾಣಿಸಿಕೊಂಡಿದ್ದರು. ಮದುವೆ ಸಂದರ್ಭ ಪ್ರಿಯಾಮಣಿ ಭಾವುಕರಾದ್ದಂತೆ ಕಂಡುಬಂದಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಪಲ್ಲಾಗೊಂದು ಪ್ರಿಯಾಮಣಿ ಮ್ಯಾರೇಜ್ ಸ್ಟೋರಿ