Publish Date: Thu, 27 Oct 2016 (10:30 IST)
Updated Date: Thu, 27 Oct 2016 (10:36 IST)
ಲಂಡನ್: ನಟ ಪ್ರಕಾಶ್ ರಾಜ್ ದೂರದ ಲಂಡನ್ ಗೆ ಹಾರಿದ್ದಾರೆ. ಅಲ್ಲೇನು ಮಾಡ್ತಿದ್ದಾರೆ ಅವರು? ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ “ಇದೊಳ್ಳೆ ರಾಮಾಯಣ” ದ ಪ್ರಚಾರಕ್ಕೆ ಅವರು ವಿದೇಶಕ್ಕೆ ಹೋಗಿದ್ದಾರೆ.
ಅಲ್ಲಿ “..ರಾಮಾಯಣ” ಚಿತ್ರ ಬಿಡುಗಡೆ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿತ್ರವನ್ನು ಅಲ್ಲಿಯೂ ಪಸರಿಸುವುದು ಅವರ ಉದ್ದೇಶ.
ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದವರು ನಟಿಸಿದ ಈ ಚಿತ್ರ ಈಗಾಗಲೇ ರಾಜ್ಯದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜತೆಗೆ ಪ್ರಕಾಶ್ ರಾಜ್ ನಟನೆಯ ತಮಿಳು ಚಿತ್ರ” ಸಿಲ ಸಮಯಂಗಳಿಲ್ “ಚಿತ್ರದ ಟೀಸರ್ ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Krishnaveni K
Publish Date: Thu, 27 Oct 2016 (10:30 IST)
Updated Date: Thu, 27 Oct 2016 (10:36 IST)