Select Your Language

Notifications

webdunia
webdunia
webdunia
webdunia

ಕೂಲಿ, ವಾರ್ 2 ಮುಂದೆಯೂ ಬಗ್ಗದ ಸು ಫ್ರಮ್ ಸೋ

Su from So movie

Krishnaveni K

ಬೆಂಗಳೂರು , ಶನಿವಾರ, 16 ಆಗಸ್ಟ್ 2025 (11:55 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕೂಲಿ, ಜ್ಯೂ ಎನ್ ಟಿಆರ್ ವಾರ್ 2 ಸಿನಿಮಾ ಬಿಡುಗಡೆಯಾದರೂ ಕನ್ನಡದ ಸು ಫ್ರಮ್ ಸೋ ಗಳಿಕೆಯಲ್ಲಿ ಜಗ್ಗಲಿಲ್ಲ.

ರಜನೀಕಾಂತ್ ಕೂಲಿ ಸಿನಿಮಾ ಮೊದಲ ದಿನವೇ 150 ಕೋಟಿ ಕಲೆಕ್ಷನ್ ಮಾಡಿದೆ. ವಾರ್ 2 ಕಲೆಕ್ಷನ್ ಕೂಡಾ 80 ಕೋಟಿ ರೂ. ತಲುಪಿದೆ. ಈ ಎರಡೂ ಸಿನಿಮಾಗಳ ನಡುವೆ ಸು ಫ್ರಮ್ ಸೋ ಸಿನಿಮಾ ಡಲ್ ಆಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.

ಆದರೆ ಸು ಫ್ರಮ್ ಸೋ ಸಿನಿಮಾ ನಿನ್ನೆಯೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ನಿನ್ನೆಯೂ ಸಿನಿಮಾ 1 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಬಿಡುಗಡೆಯಾಗಿ ಮೂರು ವಾರ ಕಳೆದರೂ ಸ್ಟಾರ್ ಸಿನಿಮಾಗಳ ನಡುವೆ ಸು ಫ್ರಮ್ ಸೋ ಸಿನಿಮಾ ಇಷ್ಟು ಗಳಿಕೆ ಮಾಡಿದ್ದು ದೊಡ್ಡ ಸಾಧನೆಯೇ ಸರಿ.

ಇದೀಗ ಸು ಫ್ರಮ್ ಸೋ ಸಿನಿಮಾ ಗಳಿಕೆ 96 ಕೋಟಿ ರೂ.ಗೆ ಬಂದು ನಿಂತಿದ್ದು ಈ ವಾರಂತ್ಯದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಕೇವಲ 5 ಕೋಟಿ ರೂ. ಬಜೆಟ್ ನಲ್ಲಿ ತಯಾರಾದ ಸಿನಿಮಾ 100 ಕೋಟಿ ರೂ. ಕ್ಲಬ್ ಗೆ ಸೇರ್ಪಡೆಯಾಗುತ್ತಿರುವುದು ದಾಖಲೆಯೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣುವರ್ಧನ್ ಚಿತಾಭಸ್ಮ ಡ್ರಮ್ ನಲ್ಲಿತ್ತು, ಅದನ್ನು ಏನು ಮಾಡಿದ್ರು: ಸಾಕುಮಗ ಶ್ರೀಧರ್ ಹೇಳಿದ್ದೇನು