ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಚಿತಾಭಸ್ಮ ಡ್ರಮ್ ನಲ್ಲಿತ್ತು. ಅದನ್ನು ಕುಟುಂಬದವರು ಏನು ಮಾಡಿದ್ರು ಎಂದು ಮಗನಂತಿದ್ದ ಶ್ರೀಧರ್ ಹೆಗ್ಗದ್ದೆ ಸ್ಟುಡಿಯೋ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಜೊತೆಯಲ್ಲಿಯೇ ಸಾಕಷ್ಟು ವರ್ಷ ಇದ್ದ ಶ್ರೀಧರ್ ಅವರ ಮನೆಮಗನಂತೇ ಇದ್ದರು. ವಿಷ್ಣುವರ್ಧನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದವರೂ ಇದೇ ಶ್ರೀಧರ್. ಆದರೆ ವಿಷ್ಣುವರ್ಧನ್ ತೀರಿಕೊಂಡ ಎರಡು ವರ್ಷಗಳ ಬಳಿಕ ಅವರ ಮನೆ ಬಿಟ್ಟು ಹೊರಬಂದಿದ್ದರು.
ಇದೀಗ ಹೆಗ್ಗದ್ದೆ ಸ್ಟುಡಿಯೋ ಯೂ ಟ್ಯೂಬ್ ಸಂದರ್ಶನದಲ್ಲಿ ವಿಷ್ಣು ಸಮಾಧಿ ನೆಲಸಮವಾದ ಬಗ್ಗೆ ಅವರು ನೋವು ಹಂಚಿಕೊಂಡಿದ್ದಾರೆ. ಯಜಮಾನರು ತೀರಿಕೊಂಡ ಬಳಿಕ ವಿಷ್ಣುಸೇನಾ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಅವರು ಚಿತಾಭಸ್ಮವನ್ನು ಒಂದು ಡ್ರಮ್ ನಲ್ಲಿ ತುಂಬಿಸಿ ಅಭಿಮಾನ್ ಸ್ಟುಡಿಯೋದಲ್ಲೇ ಇಟ್ಟುಕೊಂಡಿದ್ದರು. ಮುಂದೆ ಅದು ಬೇಕಾಗಬಹುದು ಎಂದು ಅವರ ಎತ್ತಿಟ್ಟಿದ್ದರು.
ಸ್ವಲ್ಪ ವರ್ಷಗಳ ನಂತರ ಪ್ರಸನ್ನಕುಮಾರ್ ಅವರಿಗೆ ಮನೆಯಿಂದ ಫೋನ್ ಮಾಡ್ತಾರೆ. ಇದನ್ನು ಶ್ರೀರಂಗಪಟ್ಟಣದಲ್ಲಿ ಬಿಡಬೇಕು ಬಾ ಎಂದು ಕರೆದಿದ್ದಾರೆ. ಆದರೆ ಅವರು ನನಗೆ ಬರಕ್ಕಾಗಲ್ಲ, ನನಗೆ ಮಕ್ಕಳೆಲ್ಲಾ ಇದ್ದಾರೆ ಎಂದಿದ್ದಾರೆ. ಶ್ರೀಧರ್ ಗೆ ಹೇಳಿ ಎಂದಿದ್ದಾರೆ. ಆಮೇಲೆ ಅದನ್ನು ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದ್ದಾರೆ. ಆ ಅಸ್ಥಿ ಇದ್ದಿದ್ದರೆ ನಮಗೆ ಏನೋ ಒಂದು ಸಿಕ್ಕಿರೋದು ಅಲ್ಲಿ ಎಂದಿದ್ದಾರೆ.
ಮೈಸೂರಿನಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಅಸ್ಥಿ ಹಾಕಿದ್ದಾರೆ ಎಂತಾರಲ್ಲ ಎಂದಿದ್ದಕ್ಕೆ ಅಲ್ಲಿ ಹಾಕಿದ್ದೀವಿ ಎನ್ನುತ್ತಿದ್ದಾರೆ. ಆದರೆ ನನಗೆ ಗೊತ್ತಿರುವ ಪ್ರಕಾರ ಇಲ್ಲ. ಹಾಕಿದ್ರೆ ಸಂತೋಷ ಎಂದಿದ್ದಾರೆ. ಮೈಸೂರಿನಲ್ಲಿ ಹೋದರೆ ಅದು ಸ್ಮಾರಕ ಅಷ್ಟೇ. ಈಗ ನಾವು ಶಿರಡಿ, ಧರ್ಮಸ್ಥಳ ಅಂತ ಅಲ್ಲಿಗೇ ಯಾಕೆ ಹೋಗ್ತೀವಿ? ಅಲ್ಲಿನ ದೇವರನ್ನು ತಂದು ಎಲ್ಲೋ ಪೂಜೆ ಮಾಡಬಹುದಲ್ವೇ ಎಂದಿದ್ದಾರೆ.