ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್ ನಿರ್ದೇಶಿಸಿ ನಟಿಸಿದ್ದ ಸು ಫ್ರಮ್ ಸೋ ಸಿನಿಮಾ ಸೋತಿದ್ದ ಕನ್ನಡ ಚಿತ್ರರಂಗವನ್ನು ಗೆಲ್ಲಿಸಿದೆ. ಈ ಸಿನಿಮಾಗೆ ನಿಜವಾಗಿಯೂ ಬಜೆಟ್ ಎಷ್ಟಾಗಿತ್ತು ಇಲ್ಲಿದೆ ನೋಡಿ ವಿವರ.
ಸು ಫ್ರಮ್ ಸಿನಿಮಾ ಬಜೆಟ್ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕೆಲವರು 1.5 ಕೋಟಿ ಎಂದರೆ ಮತ್ತೆ ಕೆಲವರು 4 ಕೋಟಿ ಎನ್ನುತ್ತಿದ್ದಾರೆ. ಇನ್ನು ಕೆಲವರು 5 ಕೋಟಿ ರೂ. ಎನ್ನುತ್ತಿದ್ದಾರೆ. ಹಾಗಿದ್ದರೆ ಚಿತ್ರ ನಿರ್ಮಾಣಕ್ಕೆ ನಿಜವಾಗಿಯೂ ಖರ್ಚಾಗಿದ್ದೆಷ್ಟು?
ಕಲಾವಿದರ ಸಂಭಾವನೆ, ಸಿನಿಮಾ ನಿರ್ಮಾಣ, ಪ್ರಚಾರ ಎಲ್ಲವೂ ಸೇರಿ ಚಿತ್ರದ ಬಜೆಟ್ 5.5 ಕೋಟಿ ರೂ. ಆಗಿದೆಯಂತೆ. ಇದರಲ್ಲಿ ಕಲಾವಿದರ ಸಂಭಾವನೆಗೆಂದೇ 1.5 ಕೋಟಿ ರೂ. ಖರ್ಚಾಗಿದೆ. ಕಲಾವಿದರ ಸಂಭಾವನೆ ಸಹಿತ ಸಿನಿಮಾ ತಯಾರಾಗಲು 4.5 ಕೋಟಿ ರೂ. ಖರ್ಚಾಗಿದೆ. ಉಳಿದಂತೆ 1 ಕೋಟಿ ರೂ. ಪ್ರಚಾರಕ್ಕಾಗಿ ಖರ್ಚು ಮಾಡಿದ್ದಾರೆ. ಆ ಮೂಲಕ ಸು ಫ್ರಮ್ ಸೋ ಸಿನಿಮಾದ ಒಟ್ಟು ಬಜೆಟ್ 5.5 ಕೋಟಿ ರೂ.
ಈ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆದ ಬಳಿಕ ಮಲಯಾಳಂ, ತೆಲುಗು, ಹಿಂದಿಯಲ್ಲೂ ಬಿಡುಗಡೆಯಾಗಿದೆ. ಇದೀಗ ಚಿತ್ರದ ಗಳಿಕೆ 60 ಕೋಟಿ ರೂ. ದಾಟಿದೆ. ಬಜೆಟ್ ಗೆ ಹೋಲಿಸಿದರೆ ಈ ಸಿನಿಮಾ 2025 ರಲ್ಲಿ ಅತೀ ಹೆಚ್ಚು ಲಾಭ ತಂದುಕೊಟ್ಟ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.