Select Your Language

Notifications

webdunia
webdunia
webdunia
webdunia

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

Su from So movie

Krishnaveni K

ಬೆಂಗಳೂರು , ಮಂಗಳವಾರ, 5 ಆಗಸ್ಟ್ 2025 (11:01 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕರಾವಳಿ ಮೂಲದ ಶೆಟ್ಟಿ ಗ್ಯಾಂಗ್ ನದ್ದೇ ಕಾರುಬಾರು ಎನ್ನುವವರಿಗೆ ರಾಜ್ ಬಿ ಶೆಟ್ಟಿ ಸಂದರ್ಶನವೊಂದರಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ.

ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಎಂಬ ಮೂವರು ಸ್ನೇಹಿತರು ತಮ್ಮ ಸ್ನೇಹಿತರನ್ನು ಮಾತ್ರ ಬೆಳೆಸುತ್ತಾರೆ, ಅವರಿಗೆ ಮಾತ್ರ ಅವಕಾಶ ಕೊಡುತ್ತಾರೆ. ಕರಾವಳಿ ಮೂಲದ ಕತೆಗಳನ್ನೇ ಮಾಡುತ್ತಾರೆ ಎಂಬಿತ್ಯಾದಿ ಆರೋಪಗಳನ್ನು ಕೆಲವರು ಮಾಡುತ್ತಾರೆ.

ಇದರ ಬಗ್ಗೆ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನಿಡಿದ ಸಂದರ್ಶನವೊಂದರಲ್ಲಿ ರಾಜ್ ಬಿ ಶೆಟ್ಟಿಗೆ ಪ್ರಶ್ನೆ ಮಾಡಲಾಗಿದೆ. ನಿಮ್ಮದು ಶೆಟ್ಟಿ ಗ್ಯಾಂಗ್ ಮಾಫಿಯಾ ಎಂಬ ಆರೋಪವಿದೆಯಲ್ವಾ ಎಂದು ಸಂದರ್ಶಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ ನೀವೂ ಕೂಡಾ ಗ್ಯಾಂಗ್ ಮಾಡಿ ಬ್ರದರ್, ಬೇಡ ಎಂದವರು ಯಾರು? ಒಂಟಿಯಾಗಿ ಕೆಲಸ ಮಾಡಿ ಎಂದವರು ಯಾರು? ನೀವು ಬೇರೆಯವರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿಲ್ಲ ಎಂದರೆ ಅದು ನಿಮ್ಮ ಪ್ರಾಬ್ಲಂ, ನಮ್ಮದಲ್ಲ ಎಂದಿದ್ದಾರೆ.

ಸು ಫ್ರಮ್ ಸೋ ಸಿನಿಮಾದ ಪ್ರಿ ರಿಲೀಸ್ ಪ್ರೆಸ್ ಕಾನ್ಫರೆನ್ಸ್ ನಲ್ಲೂ ರಾಜ್ ಬಿ ಶೆಟ್ಟಿಗೆ ಕರಾವಳಿ ಭಾಗದ ಕತೆಗಳನ್ನೇ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ರಾಜ್ ಬಿ ಶೆಟ್ಟಿ ನಾವು ಅದೇ ಭಾಗದಿಂದ ಬಂದವರಾಗಿದ್ದರಿಂದ ಅಲ್ಲಿನ ಕತೆ ನಮಗೆ ಹೆಚ್ಚು ಕನೆಕ್ಟ್ ಆಗುತ್ತದೆ. ಅದೇ ಕಾರಣಕ್ಕೆ ಆ ಭಾಗದ ಸಿನಿಮಾಗಳನ್ನು ಮಾಡುತ್ತಿದ್ದೇವೆ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್