Publish Date: Tue, 29 Jul 2025 (14:48 IST)
Updated Date: Tue, 29 Jul 2025 (14:56 IST)
ಬೆಂಗಳೂರು: ರಮ್ಯಾಗೆ ಡಿಬಾಸ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳುಹಿಸಿರುವ ವಿಚಾರಕ್ಕೆ ಶಿವಣ್ಣ ಮೆಸೇಜ್ ಮಾಡಿದ್ದಾರೆ. ರಮ್ಯಾ ಬೆಂಬಲಿಸಿ ಮೆಸೇಜ್ ಹಾಕಿರುವ ಶಿವಣ್ಣನಿಗೆ ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ ಎಂದು ದರ್ಶನ್ ಅಭಿಮಾನಿಗಳು ಹೇಳಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಬೇರೆ ಬೇರೆ ಖಾತೆಯಿಂದ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕಟಿಸಿ ನಿಂದಿಸಿದ್ದರು. ಇದರ ವಿರುದ್ಧ ರಮ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಣ್ಣ ಸೋಷಿಯಲ್ ಮೀಡಿಯಾ ಮೂಲಕ ರಮ್ಯಾ ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.
ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ ಅಕ್ಕನಾಗಿ, ಮಗಳಾಗಿ ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧ್ವೇಷ-ಅಸೂಯೆಗಳನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ಶಿವಣ್ಣ ಪೋಸ್ಟ್ ಮಾಡಿದ್ದರು.
ಆದರೆ ಅವರ ಈ ಪೋಸ್ಟ್ ಗೆ ಕೆಲವು ಡಿಬಾಸ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ನೀವು ರಮ್ಯಾ ಪರ ನಿಂತು ಮೆಸೇಜ್ ಮಾಡಿರುವುದು ಅಭಿನಂದನೀಯ. ಆದರೆ ನಿಮ್ಮದೇ ಮನೆಯಲ್ಲಿ ಯುವ ರಾಜ್ ಕುಮಾರ್ ಪತ್ನಿಗೆ ಅನ್ಯಾಯವಾಗಿದೆಯಲ್ಲಾ? ಅವರ ಬಗ್ಗೆನೂ ಗಮನಹರಿಸಿ. ಆಕೆಯೂ ಒಬ್ಬ ಹೆಣ್ಣಲ್ವೇ? ಮೊದಲು ಅವರಿಗೆ ನ್ಯಾಯ ಕೊಡಿಸಿ. ನಂತರ ರಮ್ಯಾ ಬಗ್ಗೆ ಮಾತನಾಡಿ ಎಂದಿದ್ದಾರೆ.