Select Your Language

Notifications

webdunia
webdunia
webdunia
webdunia

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

Amulya

Krishnaveni K

, ಮಂಗಳವಾರ, 29 ಜುಲೈ 2025 (09:26 IST)
Photo Credit: Instagram
ಬೆಂಗಳೂರು: ಮದುವೆಯಾಗಿ ಅವಳಿ ಮಕ್ಕಳ ತಾಯಿಯಾದ ಮೇಲೆ ಚೆಲುವಿನ ಚಿತ್ತಾರ ನಟಿ ಅಮೂಲ್ಯ ಬಣ್ಣದ ಲೋಕದಿಂದ ದೂರವೇ ಉಳಿದರು. ಆದರೆ ಈಗ ಕಿರುತೆರೆ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ನಟಿ ಅಮೂಲ್ಯ 2017 ರಲ್ಲಿ ಮುಗುಳು ನಗೆ ಎನ್ನುವ ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಅದಾದ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಇಬ್ಬರು ಅವಳಿ ಮಕ್ಕಳಿಗೆ ಅಮ್ಮನಾದ ಮೇಲೆ ಅಮೂಲ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಆದರೆ ಈಗ ರಿಯಾಲಿಟಿ ಶೋ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅಮೂಲ್ಯ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ನಾವು ನಮ್ಮವರು ಎನ್ನುವ ಶೋಗೆ ತೀರ್ಪುಗಾರರಲ್ಲಿ ಅಮೂಲ್ಯ ಕೂಡಾ ಒಬ್ಬರು.

ಅಮೂಲ್ಯ ಜೊತೆಗೆ ಹಿರಿಯ ನಟಿ ತಾರಾ, ಶರಣ್ ತೀರ್ಪುಗಾರರಾಗಲಿದ್ದಾರೆ. ಅಮೂಲ್ಯ ಜಡ್ಜ್ ಆಗಿರುವುದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ನಮ್ಮವರು ಎನ್ನುವುದು ಸಂಬಂಧಗಳನ್ನು ಕೂಡಿಸುವ ಶೋ. ಅಮೂಲ್ಯ ತಮ್ಮ ಕುಟುಂಬಕ್ಕೆ ತುಂಬಾ ಬೆಲೆ ಕೊಡುತ್ತಾರೆ. ಹೀಗಾಗಿ ಈ ಶೋಗೆ ಅಮೂಲ್ಯ ಬೆಸ್ಟ್ ಆಯ್ಕೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ