Select Your Language

Notifications

webdunia
webdunia
webdunia
webdunia

ರಮ್ಯಾ ಬಗ್ಗೆ ಇಷ್ಟೆಲ್ಲಾ ಕೆಟ್ಟದಾಗಿ ಡಿಬಾಸ್ ಫ್ಯಾನ್ಸ್: ಕೇಸ್ ಗೆ ಯಾರೆಲ್ಲಾ ಎಂಟ್ರಿ ಕೊಟ್ರು ನೋಡಿ

Ramya

Krishnaveni K

ಬೆಂಗಳೂರು , ಸೋಮವಾರ, 28 ಜುಲೈ 2025 (14:36 IST)

ಬೆಂಗಳೂರು: ನಟಿ ರಮ್ಯಾ ಮತ್ತು ಡಿಬಾಸ್ ಫ್ಯಾನ್ಸ್ ನಡುವಿನ ಕಾಳಗ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಡಿಬಾಸ್ ಫ್ಯಾನ್ಸ್ ಕಳುಹಿಸಿದ ಅಶ್ಲೀಲ ಸಂದೇಶಗಳನ್ನು ರಮ್ಯಾ ಬಹಿರಂಗಪಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಿದ್ದ ರಮ್ಯಾ ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. ಅವರ ಪೋಸ್ಟ್ ನೋಡಿದ ಬಳಿಕ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ ಮಾಡಿ ನಿಂದಿಸುತ್ತಲೇ ಇದ್ದಾರೆ.

ಇದರ ವಿರುದ್ಧ ಸಿಡಿದೆದ್ದ ರಮ್ಯಾ ಈಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಇನ್ನೊಂದೆಡೆ ರಾಜ್ಯ ಮಹಿಳಾ ಆಯೋಗವೂ ರಮ್ಯಾ ನೆರವಿಗೆ ಧಾವಿಸಿದೆ. ರಮ್ಯಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ ನೀಡಿದೆ.

ಇನ್ನು, ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡಿಬಾಸ್ ಫ್ಯಾನ್ಸ್ ಕೆಟ್ಟ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ಪ್ರಕಟಿಸಿದ್ದಾರೆ. ಈ ಸಂದೇಶಗಳಲ್ಲೆಲ್ಲವೂ ರಮ್ಯಾ ಬಗ್ಗೆ ಅತ್ಯಂತ ಅಶ್ಲೀಲ ಶಬ್ಧಗಳಲ್ಲಿ ನಿಂದಿಸಲಾಗಿದೆ. ಹೀಗಾಗಿಯೇ ಇವರಿಗೂ ರೇಣುಕಾಸ್ವಾಮಿ ಸಂದೇಶಗಳಿಗೂ ಏನು ವ್ಯತ್ಯಾಸ ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ಮೇಡಂ ಪರ ನಿಲ್ಲದೇ ಹೋದ್ರೆ ಮನುಷ್ಯರಾಗಲೂ ನಾಲಾಯಕ್: ಬಿಗ್ ಬಾಸ್ ಪ್ರಥಮ್