Select Your Language

Notifications

webdunia
webdunia
webdunia
webdunia

ರಮ್ಯಾ ಮೇಡಂ ಪರ ನಿಲ್ಲದೇ ಹೋದ್ರೆ ಮನುಷ್ಯರಾಗಲೂ ನಾಲಾಯಕ್: ಬಿಗ್ ಬಾಸ್ ಪ್ರಥಮ್

Ramya-Pratham

Krishnaveni K

ಬೆಂಗಳೂರು , ಸೋಮವಾರ, 28 ಜುಲೈ 2025 (12:37 IST)
ಬೆಂಗಳೂರು: ಡಿಬಾಸ್ ಫ್ಯಾನ್ಸ್ ಮತ್ತು ರಮ್ಯಾ ನಡುವಿನ ಕಾಳಗದಲ್ಲಿ ಈಗ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ರಮ್ಯಾ ಮೇಡಂ ಬೆಂಬಲಕ್ಕೆ ನಿಲ್ಲದೇ ಹೋದರೆ ನಾವು ಮನುಷ್ಯರನಿಸಿಕೊಳ್ಳಲೂ ಯೋಗ್ಯತೆಯಿಲ್ಲ ಎಂದಿದ್ದಾರೆ.

ಡಿ ಬಾಸ್ ಫ್ಯಾನ್ಸ್ ಮತ್ತು ಪ್ರಥಮ್ ನಡುವೆಯೂ ತಿಕ್ಕಾಟಗಳಾಗಿವೆ. ದರ್ಶನ್ ಅಭಿಮಾನಿಗಳು ಇತ್ತೀಚೆಗೆ ನಟ ಪ್ರಥಮ್ ಗೆ ದೇವಸ್ಥಾನವೊಂದಕ್ಕೆ ಹೋಗಿದ್ದಾಗ ದಾಳಿ ನಡೆಸಿದ್ದಾರೆ ಎಂದು ಸುದ್ದಿಯಿದೆ. ಈ ಬಗ್ಗೆ ಪ್ರಥಮ್ ಹಾಗೂ ಲಾಯರ್ ಜಗದೀಶ್ ನಡುವೆ ನಡೆದಿದ್ದ ಅಡಿಯೋ ಒಂದು ವೈರಲ್ ಆಗಿತ್ತು. ಇದಾದ ಬಳಿಕ ಪ್ರಥಮ್ ಕೂಡಾ ಈಗ ಘಟನೆ ಬಗ್ಗೆ ಮಾತನಾಡಿದ್ದು ಪೊಲೀಸರಿಗೆ ದೂರು ನೀಡಲು ಮುಂದೆ ಬಂದಿದ್ದಾರೆ.

ಇನ್ನು, ಇದೇ ವೇಳೆ ನಟಿ ರಮ್ಯಾ ಕೂಡಾ ದರ್ಶನ್ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಡಿಬಾಸ್ ಫ್ಯಾನ್ಸ್ ನಿರಂತರ ಬೆದರಿಕೆಯ ಸಂದೇಶ ಹಾಕುತ್ತಿದ್ದಾರೆ ಎಂದು ಆರೋಪವಾಗಿದೆ. ಇದರ ವಿರುದ್ಧ ರಮ್ಯಾ ಈಗ ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ.

ಇದೆಲ್ಲದರ ನಡುವೆ ರಮ್ಯಾಗೆ ತಮ್ಮ ಬೆಂಬಲವಿದೆ ಎಂದು ಪ್ರಥಮ್ ಹೇಳಿದ್ದಾರೆ. ಇಷ್ಟೆಲ್ಲಾ ಆದ್ರೂ  ನೋಡದೇ ಮೌನವಾಗಿರೋ ನಮ್ಮೆಲ್ಲಾ ಕಲಾವಿದರಿಗೆ ಗೌರವಪೂರ್ವಕ ಸೆಲ್ಯೂಟ್ ಹೊಡೆಯುತ್ತಾ ಈಗಲೂ ನಾವು ರಮ್ಯಾ ಮೇಡಮ್ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ, ಮನುಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗಬೇಕು. ನಾನು ರಮ್ಯಾ ಮೇಡಂ ಪರ ಇದ್ದೇನೆ ಎಂದು ಬರೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ