Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಡುವೆ ಸರಿಯಿಲ್ವಾ: ರಿಷಭ್ ಈ ಒಂದು ಪೋಸ್ಟ್ ಎಲ್ಲದಕ್ಕೂ ಉತ್ತರ

ಸು ಫ್ರಮ್ ಸೋ ಸಿನಿಮಾ ವಿಮರ್ಶೆ

Sampriya

ಬೆಂಗಳೂರು , ಸೋಮವಾರ, 28 ಜುಲೈ 2025 (14:55 IST)
Photo Credit X
ಬೆಂಗಳೂರು: ಕಾಂತಾರ 2ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಅವರು ಕಾಂತಾರ 1 ರಿಂದ ಆಚೆ ಉಳಿದಿರುವುದಕ್ಕೆ ರಿಷಬ್‌ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಹರಿದಾಡಿತ್ತು. ಆದರೆ ಈ ಟೀಕೆಯ ಬಗ್ಗೆ ಇದುವರೆಗೆ ಇಬ್ಬರು ಸ್ಪಷ್ಟನೆಯಲ್ಲಿ ನೀಡಿರಲಿಲ್ಲ.   

ಆದರೆ ಇದೀಗ ರಿಷಬ್ ಶೆಟ್ಟಿ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ ಇದೆಲ್ಲದಕ್ಕೂ ಸ್ಪಷ್ಟನೆಯನ್ನು ನೀಡಿದೆ. 

ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ಸದ್ದಿಲ್ಲದೆ ಥಿಯೇಟರ್‌ಗೆ ಬಂದ ‘ಸು ಫ್ರಮ್ ಸೋ’ ಸಿನಿಮಾ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಇದೀಗ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ.  ಈ ಸಂಬಂಧ ರಿಷಬ್ ಶೆಟ್ಟಿ ಅವರು ಚಿತ್ರತಂಡಕ್ಕೆ ಶುಭಕೋರಿ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ನೀವೆಲ್ಲರೂ ಸು ಫ್ರಮ್ ಸೋ ಚಿತ್ರಕ್ಕೆ ನೀಡಿರುವ ಅಧ್ಬುತ ಬೆಂಬಲ ಮತ್ತು ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ. ರಚಿಸಿ ನಿರ್ದೇಶನ ಮಾಡಿದ ಜೆಪಿ ತುಮಿನಾಡ್  ಅವರಿಗೆ ಚಿತ್ರರಂಗಕ್ಕೆ ಸ್ವಾಗತ! ಅವರ ಚೊಚ್ಚಲ ಪ್ರಯತ್ನ  ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್‌ ಬಿಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರು ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು.  ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಮಗಳು ಹೊರಬರುತ್ತಿದೆ. 

ನಟರಾದ  ಶನಿಲ್ ಗೌತಮ್, ಜೆಪಿ ತುಮಿನಾಡ್‌, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್‌, ದೀಪಕ್ ರೈ ಪನಾಜೆ, ಪುಷ್ಪರಾಜ್ ಬೋಳಾರ್‌, ಮೈಮ್ ರಾಮದಾಸ್ ಸೇರಿದಂತೆ ಪ್ರತಿಯೊಬ್ಬ ಕಲಾವಿದನ ಅಭಿನಯವೂ ಗಮನ ಸೆಳೆಯುತ್ತಿದೆ. ಎಲ್ಲಕ್ಕೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. 

ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ನೀಡಿದ ಇಡೀ ಸು ಫ್ರಮ್ ಸೋ ತಂಡಕ್ಕೆ ನನ್ನ ಅಭಿನಂದನೆಗಳು. ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡಯ ದಿನಗಳಿಗೆ ಕರೆದುಕೊಂಡು ಹೋಯಿತು. ಈ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ಸು ಫ್ರಮ್‌ ಸೋ ದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. 

ನಿಮ್ಮ ಈ ಪ್ರಯತ್ನಕ್ಕೆ ಇನ್ನಷ್ಟು ದೊಡ್ಡ ಯಶಸ್ಸು ಸಿಗಲಿ ಎಂಧು ಹಾರೈಸುತ್ತೇನೆ! ಕನ್ನಡ ಚಿತ್ರರಂಗಕ್ಕೆ ನಿಮ್ಮ ಬೆಂಬಲ ಹೀಗೆತೇ ಇರಲಿ

ಜೈ ಹಿಂದ್, ಜೈ ಕರ್ನಾಟಕ ಮಾತೆ

ಇಂತಿ ನಿಮ್ಮ

ರಿಷಬ್ ಶೆಟ್ಟಿ


Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ಬಗ್ಗೆ ಇಷ್ಟೆಲ್ಲಾ ಕೆಟ್ಟದಾಗಿ ಡಿಬಾಸ್ ಫ್ಯಾನ್ಸ್: ಕೇಸ್ ಗೆ ಯಾರೆಲ್ಲಾ ಎಂಟ್ರಿ ಕೊಟ್ರು ನೋಡಿ