ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್ ನಿರ್ದೇಶಿಸಿ, ನಟಿಸಿರುವ ಸು ಫ್ರಮ್ ಸೋ ಸಿನಿಮಾ ಈಗ ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾದ ದಾಖಲೆಯನ್ನೂ ಮುರಿಯಲು ಮುಂದಾಗಿದೆ.
									
			
			 
 			
 
 			
					
			        							
								
																	ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕು ಎನ್ನುವ ಸಿದ್ಧಸೂತ್ರವನ್ನು ತೊಡೆದು ಹಾಕಿದ ಸಿನಿಮಾ ಸು ಫ್ರಮ್ ಸೋ. ಈ ಸಿನಿಮಾ ಕೇವಲ 5 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿ 70 ಕೋಟಿ ರೂ.ಗೆ ಬಂದು ತಲುಪಿದೆ. ಈ ಮೂಲಕ ಕಾಟೇರ ದಾಖಲೆಯನ್ನೂ ಮುರಿಯಲು ಸಜ್ಜಾಗಿದೆ.
									
										
								
																	ಕಾಟೇರ ಸಿನಿಮಾ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 80 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಈ ಸಿನಿಮಾದಲ್ಲಿ ಸ್ಟಾರ್ ನಟರಿದ್ದರು ಮತ್ತು ಅಬ್ಬರದ ಪ್ರಚಾರವೂ ಇತ್ತು. ಆದರೆ ಸು ಫ್ರಮ್ ಸೋ ಸಿನಿಮಾ ಇದೆಲ್ಲವನ್ನೂ ಮೀರಿ ಯಶಸ್ವಿಯಾಗಿದೆ.
									
											
							                     
							
							
			        							
								
																	ಸು ಫ್ರಮ್ ಸೋ ಸಿನಿಮಾ ಇನ್ನೊಂದು  ವಾರದಲ್ಲಿ ಕಾಟೇರ ದಾಖಲೆಯನ್ನೂ ಅಳಿಸುವ ನಿರೀಕ್ಷೆಯಿದೆ. ಈ ವಾರ ರಜನೀಕಾಂತ್ ನಾಯಕರಾಗಿರುವ ಕೂಲಿ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಸು ಫ್ರಮ್ ಸೋ ಸಿನಿಮಾಗೆ ಕೊಂಚ ಹೊಡೆತ ಬೀಳಬಹುದು. ಹಾಗಿದ್ದರೂ 80 ಕೋಟಿ ರೂ. ತಲುಪುವ ನಿರೀಕ್ಷೆಯಿದೆ.