Publish Date: Sat, 27 Aug 2022 (08:30 IST)
Updated Date: Sat, 27 Aug 2022 (08:41 IST)
ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿರುವ ಕೆಜಿಎಫ್ ಚಾಚ ಖ್ಯಾತಿಯ ನಟ ಹರೀಶ್ ರಾಯ್ ಗೆ ಈಗ ನೆರವಿನ ಮಹಾಪೂರ ಹರಿದುಬರುತ್ತಿದೆ.
ಹರೀಶ್ ರಾಯ್ ಅವರ ಅನಾರೋಗ್ಯ ಮತ್ತು ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಹಲವರು ಅವರ ಸಹಾಯಕ್ಕೆ ಬಂದಿದ್ದಾರೆ.
ವಿಶೇಷವಾಗಿ ಅವರ ಕಷ್ಟ ನೋಡಿ ಸ್ಟಾರ್ ನಟರೊಬ್ಬರು ಎಲ್ಲಾ ರೀತಿಯ ನೆರವು ಕೊಡಲು ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ, ಅವರ ಕುಟುಂಬಕ್ಕೂ ಸಹಾಯ ಮಾಡುತ್ತಿದ್ದಾರಂತೆ. ಆದರೆ ಆ ನಟ ಯಾರು ಎಂದು ಹೆಸರು ಬಹಿರಂಗಪಡಿಸಬಾರದು ಎಂದು ಅವರು ಷರತ್ತು ವಿಧಿಸಿದ್ದಾರಂತೆ. ಅದೇ ಕಾರಣಕ್ಕೆ ನಟನ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದಿದ್ದಾರೆ ಹರೀಶ್ ರಾಯ್. ಆದರೆ ಇಂದು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ. ತಿಂಗಳಿಗೆ ಕೋಟಿ ಖರ್ಚಾದರೂ ತೊಂದರೆಯಿಲ್ಲ. ನಾನಿದ್ದೇನೆ. ನೀವು ನನ್ನ ಕುಟುಂಬದವರು ಎಂದಿದ್ದಾರಂತೆ ಆ ನಟ ಎಂದಿದ್ದಾರೆ ಹರೀಶ್ ರಾಯ್. ಆದರೆ ಆ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಎಂದೇ ಎಲ್ಲರೂ ಊಹಿಸಿದ್ದಾರೆ.