Select Your Language

Notifications

webdunia
webdunia
webdunia
webdunia

ದೊಡ್ಮನೆ ಹುಡುಗ ಧೀರೇನ್ ಚಿತ್ರರಂಗದಲ್ಲಿ ಮಿಂಚ್ತಾನಾ?

ಧೀರೇನ್ ರಾಮ್ ಕುಮಾರ್
ಬೆಂಗಳೂರು: ಡಾ.ರಾಜ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಮತ್ತೊಬ್ಬ ಕುಡಿ ಆಗಮನವಾಗುತ್ತಿದೆ. ಡಾ.ರಾಜ್ ಪುತ್ರಿ ಪೂರ್ಣಿಮಾ ಪುತ್ರ ಧೀರೇನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ ಶಿವ 143 ಇಂದು ಬಿಡುಗಡೆಯಾಗುತ್ತಿದೆ.

ತಂದೆ ರಾಮ್ ಕುಮಾರ್ ಕೂಡಾ ನಾಯಕ ನಟನಾಗಿ ಒಂದು ಕಾಲದಲ್ಲಿ ಹೆಣ್ಣು ಮಕ್ಕಳ ಫೇವರಿಟ್ ಆಗಿದ್ದರು. ಕೆಲವು ಸಮಯದ ಮೊದಲು ರಾಮ್ ಕುಮಾರ್ ಪುತ್ರಿ ಧನ್ಯಾ ನಿನ್ನ ಸನಿಹಕೆ ಸಿನಿಮಾ ಮೂಲಕ ತೆರೆಗೆ ಬಂದು ಅಭಿನಯ ತಮ್ಮ ರಕ್ತದಲ್ಲೇ ಬಂದಿದೆ ಎಂದು ಸಾಬೀತುಪಡಿಸಿದ್ದರು.

ಇದೀಗ ಧೀರೇನ್ ಸರದಿ. ಈ ಮೊದಲು ಮಾವ ಪುನೀತ್ ರಾಜ್ ಕುಮಾರ್ ಶಿವ 143 ಚಿತ್ರದ ತುಣುಕೊಂದನ್ನು ನೋಡಿ ಕೊನೆಗೂ ನಮ್ಮ ಕುಟುಂಬದಿಂದ ಒಬ್ಬ ಹೀರೋ ಬಂದ ಎಂದಿದ್ದರಂತೆ. ಅದು ನಿಜವಾಗುತ್ತದಾ ಎಂದು ನೋಡಬೇಕಾದರೆ ಇಂದು ಪ್ರೇಕ್ಷಕರು ಕೊಡುವ ತೀರ್ಪಿನ ಮೇಲೆ ನಿಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸಾರ್ ಮುಗಿಸಿದ ಮಾನ್ಸೂನ್ ರಾಗ ರಿಲೀಸ್ ಗೆ ರೆಡಿ