Publish Date: Fri, 26 Aug 2022 (08:10 IST)
Updated Date: Fri, 26 Aug 2022 (08:46 IST)
ಬೆಂಗಳೂರು: ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆನ್ಸಾರ್ ಮುಗಿಸಿದೆ.
ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಇದಕ್ಕೂ ಮೊದಲು ಸಿನಿಮಾ ಆಗಸ್ಟ್ 19 ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆಯಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು.
ಚಿತ್ರತಂಡ ಇದುವರೆಗೆ ಹೊಸ ರಿಲೀಸ್ ದಿನಾಂಕ ಬಹಿರಂಗಪಡಿಸಿಲ್ಲ. ಮ್ಯೂಸಿಕಲೀ ಹಿಟ್ ಆಗಿರುವ ಮಾನ್ಸೂನ್ ರಾಗ ಸಿನಿಮಾ ಬಗ್ಗೆ ಜನರಲ್ಲಿ ಭಾರೀ ನಿರೀಕ್ಷೆಯಿದೆ.