ಬೆಂಗಳೂರು: ಜೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಜೊತೆಗೆ ಸಿನಿಮಾ ಮಾಡಲಿರುವ ವಿಚಾರ ಈಗಾಗಲೇ ಘೋಷಣೆಯಾಗಿತ್ತು.
ಅಭಿಷೇಕ್ ಹುಟ್ಟುಹಬ್ಬದಂದು ಈ ಸಿನಿಮಾ ಘೋಷಣೆಯಾಗಿತ್ತು. ಇದು ಅಭಿ ಪಾಲಿನ ನಾಲ್ಕನೇ ಸಿನಿಮಾವಾಗಿದೆ. ಆದರೆ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ.
ಇದೀಗ ಸುಮಲತಾ ಅಂಬರೀಶ್ ಹುಟ್ಟುಹಬ್ಬದಂದು ಅಂದರೆ ಆಗಸ್ಟ್ 27 ರಂದು ಚಿತ್ರತಂಡ ಈ ಸಿನಿಮಾದ ಟೈಟಲ್, ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಇದಕ್ಕೆ ಪ್ರತಿಷ್ಠಿತ ಸಂಸ್ಥೆಯೊಂದು ಬಂಡವಾಳ ಹೂಡುತ್ತಿದೆ. ಅದೂ ಕೂಡಾ ಆಗಸ್ಟ್ 27 ರಂದೇ ರಿವೀಲ್ ಆಗಲಿದೆ. ಮೂಲಗಳ ಪ್ರಕಾರ ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಸ್ಪಷ್ಟನೆ ಶನಿವಾರವೇ ಸಿಗಲಿದೆ.