Publish Date: Thu, 25 Aug 2022 (09:40 IST)
Updated Date: Thu, 25 Aug 2022 (09:52 IST)
ಹೈದರಾಬಾದ್: ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಅಭಿನಯದ ಲೈಗರ್ ಸಿನಿಮಾ ಇಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಆದರೆ ಲೈಗರ್ ಸಿನಿಮಾಗೆ ಇದುವರೆಗೆ ಇದ್ದ ಕ್ರೇಜ್, ಹೈಪ್ ಗಳೆಲ್ಲಾ ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಮೊದಲ ಶೋ ನೋಡಿದ ಪ್ರೇಕ್ಷಕರು ಇದು ಬರೀ ಬಿಲ್ಡಪ್ ಸಿನಿಮಾ ಎಂದು ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ.
ಫಸ್ಟ್ ಹಾಫ್ ವರೆಗೂ ವಿಲನ್ ಇಲ್ಲ. ಬರೀ ವಿಜಯ್ ದೇವರಕೊಂಡಗೆ ಬಿಲ್ಪಪ್, ಅವರ ಬಾಡಿ ಬಿಲ್ಡಪ್ ನೋಡಲು ಈ ಸಿನಿಮಾ ನೋಡಬೇಕಷ್ಟೇ. ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಕತೆಯೇ ಇಲ್ಲ, ಅಬ್ಬರವೇ ಎಲ್ಲಾ. ಸಿನಿಮಾಗೆ ಯಾರಾದರೂ ವಿಲನ್ ಅಂತಿದ್ದರೆ ಅದು ನಿರ್ದೇಶಕ ಪೂರಿ ಜಗನ್ನಾಥ್ ಎಂದು ಪ್ರೇಕ್ಷಕರು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲ, ವಿಜಯ್ ದೇವರಕೊಂಡ ಬಾಲಿವುಡ್ ನನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವುದನ್ನು ಬಿಡಬೇಕು. ಈ ಹಿಂದೆ ಡಿಯರ್ ಕಾಮ್ರೇಡ್ ಸಿನಿಮಾಗೂ ಅತಿಯಾದ ಪ್ರಚಾರವೇ ಇತ್ತಷ್ಟೇ ಹೊರತು ಅದಕ್ಕೆ ತಕ್ಕ ಸಿನಿಮಾ ಇರಲಿಲ್ಲ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.