Publish Date: Wed, 24 Aug 2022 (09:40 IST)
Updated Date: Wed, 24 Aug 2022 (09:47 IST)
ಬೆಂಗಳೂರು: ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಡಾಲಿ ಧನಂಜಯ್ ಒಂದೊಳ್ಳೆ ನಿರ್ಧಾರಕ್ಕೆ ಬಂದಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಹಾಕಿದ್ದಾರೆ.
ಡಾಲಿ ಧನಂಜಯ್ ಈಗಾಗಲೇ ತಮ್ಮ ನಿರ್ಮಾಣ ಸಂಸ್ಥೆಯಿಂದ ಬಡವ ರಾಸ್ಕಲ್ ಸಿನಿಮಾ ಮಾಡಿ ಲಾಭ ಮಾಡಿಕೊಂಡಿದ್ದಾರೆ. ಇದೀಗ ಹೆಡ್ ಬುಷ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ ತಮ್ಮ ನಿರ್ಮಾಣ ಸಂಸ್ಥೆಯಿಂದ ಪ್ರತೀ ವರ್ಷ ಎರಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇದರಲ್ಲಿ ಒಂದು ಸಿನಿಮಾವನ್ನು ಗಾಂಧಿನಗರಕ್ಕೆ ಸಿನಿಮಾ ಮಾಡಬೇಕೆಂಬ ಕನಸು ಕಟ್ಟಿಕೊಂಡು ಬರುವ ಹೊಸಬರಿಗಾಗಿಯೇ ಮೀಸಲಿಡಲಿದ್ದಾರೆ. ಈ ಮೂಲಕ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುತ್ತಿದ್ದ ಪುನೀತ್ ರಾಜ್ ಕುಮಾರ್ ಹಾದಿಯಲ್ಲೇ ನಡೆಯಲು ತೀರ್ಮಾನಿಸಿದ್ದಾರೆ.