Publish Date: Wed, 24 Aug 2022 (09:20 IST)
Updated Date: Wed, 24 Aug 2022 (09:29 IST)
ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಎರಡನೇ ಬಾರಿ ಕೊರೋನಾ ಸೋಂಕಿಗೊಳಗಾಗಿದ್ದಾರೆ.
ಈಗಷ್ಟೇ ನನಗೆ ಕೊರೋನಾ ಖಚಿತವಾಗಿದೆ. ನನ್ನ ಹತ್ತಿರವಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅಮಿತಾಭ್ ಬಚ್ಚನ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
2020 ರಲ್ಲಿ ಅಮಿತಾಭ್ ಮೊದಲ ಬಾರಿಗೆ ಕೊರೋನಾ ಸೋಂಕಿಗೊಳಗಾಗಿದ್ದರು. ಇದೀಗ ಮತ್ತೆ ಸೋಂಕಿಗೊಳಗಾಗಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಂಡ ಬಳಿಕ ಚಿತ್ರೀಕರಣಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.