Publish Date: Tue, 23 Aug 2022 (09:30 IST)
Updated Date: Tue, 23 Aug 2022 (09:40 IST)
ಕೋಲ್ಕೊತ್ತಾ: ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಈಗಾಗಲೇ ಬಾಯ್ಕಾಟ್ ಟ್ರೆಂಡ್ ನಿಂದಾಗಿ ನಷ್ಟದಲ್ಲಿದೆ. ಇದೀಗ ಸಿನಿಮಾ ನಿಷೇಧಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕೋಲ್ಕೊತ್ತಾದಲ್ಲಿ ಸಿನಿಮಾ ನಿಷೇಧಕ್ಕೆ ಆಗ್ರಹಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಸಿನಿಮಾದಲ್ಲಿ ಸೈನಿಕರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ. ಇದು ಶಾಂತಿ ಕದಡಬಹುದು. ಹೀಗಾಗಿ ಥಿಯೇಟರ್ ನಲ್ಲಿ ಗಲಾಟೆ ಆದರೂ ಅಚ್ಚರಿಯಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಸಿನಿಮಾದಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಚಿತ್ರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿತ್ತು.