Select Your Language

Notifications

webdunia
webdunia
webdunia
webdunia

ರಾಕೆಟರಿ ಸಿನಿಮಾದಿಂದ ಮನೆ ಮಾರಿದ್ರಾ ನಟ ಆರ್. ಮಾಧವನ್? ನಿಜವೇನು?

webdunia
ಮುಂಬೈ , ಗುರುವಾರ, 18 ಆಗಸ್ಟ್ 2022 (11:41 IST)
ಮುಂಬೈ: ಸ್ಪುರದ್ರೂಪಿ ನಟ ಆರ್.ಮಾಧವನ್ ನಿರ್ದೇಶಿಸಿ ನಟಿಸಿದ್ದ ರಾಕೆಟರಿ ದಿ ನಂಬಿ ಇಫೆಕ್ಟ್ ಸಿನಿಮಾದಿಂದಾಗಿ ಮನೆ ಕಳೆದುಕೊಂಡರಾ? ಹೀಗೊಂದು ರೂಮರ್ ಹರಿದಾಡುತ್ತಿದ್ದು ಇದಕ್ಕೆ ಸ್ವತಃ ಮಾಧವನ್ ಸ್ಪಷ್ಟನೆ ಕೊಟ್ಟಿದ್ದಾರೆ.

ನಂಬಿ ನಾರಾಯಣನ್ ಅವರ ಜೀವನಾಧಾರಿತ ರಾಕೆಟರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಹೀಗಾಗಿ ಮಾಧವನ್ ಹಣಕಾಸಿನ ಸಂಕಷ್ಟ ತೀರಿಸಲು ಮನೆ ಮಾರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವನ್, ‘ಅಬ್ಬಾ.. ನನ್ನ ತ್ಯಾಗವನ್ನು ಅತಿಯಾಗಿ ಬಿಂಬಿಸಬೇಡಿ. ನಾನು ನನ್ನ ಮನೆ ಅಥವಾ ಏನನ್ನೂ ಕಳೆದುಕೊಂಡಿಲ್ಲ. ಅದರ ಬದಲು ರಾಕೆಟರಿ ಸಿನಿಮಾ ತಂಡದವರು ಈ ಬಾರಿ ಹೆಚ್ಚು ಆದಾಯ ತೆರಿಗೆ ಪಾವತಿಸಲಿದ್ದಾರೆ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿ ಆಗಿದೆ’ ಎಂದಿದ್ದಾರೆ ಮಾಧವನ್.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಬಳಿಕ, ಅನನ್ಯಾ ಜೊತೆ ವಿಜಯ್ ಕ್ಲೋಸ್! ಶುರುವಾಯ್ತು ಗಾಸಿಪ್