Publish Date: Wed, 17 Aug 2022 (21:01 IST)
Updated Date: Wed, 17 Aug 2022 (21:19 IST)
ಗಲಾಟೆ ಸಂಬಂಧ ಈವರೆಗೆ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿವೆ. ಸಾವರ್ಕರ್ ಫ್ಲೆಕ್ಸ್ನ್ನು ತೆರವುಗೊಳಿಸುವ ವೇಳೆ ಕಿಡಿಗೇಡಿಗಳು ತೆಗಿರೋ ಆ ಸಾವರ್ಕರ್ ಫೋಟೋ ತೇರಿ ಮಾಕಿ ಎಂದು ಕೂಗಿ, ನಂತರ ಫ್ಲೆಕ್ಸ್ ಕಿತ್ತು ಹಾಕಿದ್ದರು.ಈ ಸಂಬಂಧ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ ಕೂಗಿದ್ದಾರೆಂದು ಅನ್ಯಕೋಮಿನ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಪೊಲೀಸರು 2ನೇ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಮೂರರಿಂದ ನಾಲ್ಕು ಜನರು ಕಾರಣಕರ್ತರು ಎಂದು ಪೊಲೀಸ್ ಎಫ್ಐಆರ್ನಲ್ಲಿ ದಾಖಲಾಗಿದೆ. ಎಫ್ಐಆರ್ನಲ್ಲಿ ಅಪರಿಚಿತ ವ್ಯಕ್ತಿಗಳು ಎಂದು ಪ್ರಕರಣ ದಾಖಲಾಗಿದೆ. ಆ 4 ಜನರಿಗೆ ದೊಡ್ಡಪೇಟೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.