Select Your Language

Notifications

webdunia
webdunia
webdunia
webdunia

ಕೋಲಾರದಲ್ಲಿ ಖಾಸಗಿ ಬಸ್ ಅಪಘಾತ

ಕೋಲಾರದಲ್ಲಿ ಖಾಸಗಿ ಬಸ್ ಅಪಘಾತ
ಕೋಲಾರ , ಬುಧವಾರ, 17 ಆಗಸ್ಟ್ 2022 (20:57 IST)
ಮುಳಬಾಗಿಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ ಸಂಭವಿಸಿದೆ, ಬಸ್‌ನಲ್ಲಿದ್ದ ಆಂಧ್ರಪ್ರದೇಶ ಮೂಲದ ದಂಪತಿ ಮೃತಪಟ್ಟಿದ್ದಾರೆ. ಮೃತರನ್ನು ವಿಜಯವಾಡದ ಮೂಲದ ಷರೀಫ್ ಹಾಗೂ ಮೈಮುನ್ನಿಸಾ ಎಂದು ಗುರುತಿಸಲಾಗಿದೆ.15 ಮಂದಿ ಗಾಯಾಳುಗಳಾಗಿದ್ದು, ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಸ್‌ನಲ್ಲಿ‌ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು.ಆಂಧ್ರಪ್ರದೇಶದ ನಲ್ಲೂರಿನ ವೇಮೂರಿ-ಕಾವೇರಿ ಟ್ರಾವಲ್ಸ್ ಗೆ ಸೇರಿದ ಬಸ್ ಇದಾಗಿದ್ದು, ಗುಂಟೂರಿನಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಮುಂಜಾನೆ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಪಲ್ಟಿಯಾಗಿರಬಹುದು ಎಂದು ಹೇಳಲಾಗುತ್ತಿದೆ.ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಹಾಗೂ ಕೋಲಾರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್ ಪಲ್ಟಿಯಾದ ತಕ್ಷಣ ಬಸ್ ನ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗದ ರೀತಿ ಕಲ್ಪತರು ನಾಡಿನಲ್ಲಿ ಸಾವರ್ಕರ್ ಪ್ಲೆಕ್ಸ್..!