Select Your Language

Notifications

webdunia
webdunia
webdunia
webdunia

ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕರಿಗೆ 50 ಲಕ್ಷ ರೂ.: ಶ್ರೀನಿವಾಸಗೌಡ ಬಾಂಬ್‌

srinivas gowda kolar jds ಜೆಡಿಎಸ್‌ ಶ್ರೀನಿವಾಸ್‌ ಗೌಡ ಕೋಲಾರ
bengaluru , ಶನಿವಾರ, 11 ಜೂನ್ 2022 (18:00 IST)
ಮುಂಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಶಾಸಕರಿಗೆ 50 ಲಕ್ಷ ರೂ. ನೀಡಲಾಗಿದೆ ಎಂದು ಕೋಲಾರದ ಜೆಡಿಎಸ ಶಾಸಕ ಕೆ. ಶ್ರೀನಿವಾಸ ಗೌಡ ಬಾಂಬ್‌ ಸಿಡಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಜೆಡಿಎಸ್‌ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂಬ ಸುದ್ದಿ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ಕೋಲಾರದ ಪರಿಷತ್‌ ಚುನಾವಣೆ ವೇಳೆ ಗೋವಿಂದ ರಾಜು ಗೆಲ್ಲಿಸಲು ಜೆಡಿಎಸ್‌ ಶಾಸಕರಿಗೆ 50 ಲಕ್ಷ ರೂ. ಲಂಚ ನೀಡಲಾಗಿದ್ದು, ನನಗೆ ಕೊಡಲು ಬಂದಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.
ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರೆ ಮಾಡಲಿ. ನಾನು ಈಗಾಗಲೇ ಕಾಂಗ್ರೆಸ್‌ ಜೊತೆ ಒಡನಾಟ ಹೊಂದಿದ್ದೇನೆ. ಇವರು ದಿನಕ್ಕೊಂದು ರೀತಿ ಹೇಳಿಕೆ ಕೊಡುತ್ತಾರೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲು ಆಗುತ್ತಾ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ರೇಟಿಂಗ್‌ ಏರಿಸಿದ ಫಿಚ್‌