Select Your Language

Notifications

webdunia
webdunia
webdunia
webdunia

ಇವನಿಗೆ ಯಾರಿ ಹೆದರುತ್ತಾರೆ: ಜೆಡಿಎಸ್‌ ಶಾಸಕ ಗುಬ್ಬಿ ಶ್ರೀನಿವಾಸ್

gubbi srinivas hd kumar swamy jds tumakur ತುಮಕೂರು ಎಚ್‌ ಡಿಕುಮಾರಸ್ವಾಮಿ ಗುಬ್ಬಿ ಶ್ರೀನಿವಾಸ್
bengaluru , ಶನಿವಾರ, 11 ಜೂನ್ 2022 (14:29 IST)
ನಾನೇನು ಇವನಿಗೆ ಹದರಿಕೊಳ್ಳಬೇಕಾ? ನಾನು ಬ್ಯಾಲೆಟ್‌ ಪೇಪರ್‌ ಸರಿಯಾಗಿಯೇ ತೋರಿಸಿದ್ದೇನೆ. ಅವನೇನು ಕತ್ತೆ ಕಾಯ್ದಿದ್ದನಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್‌ ಶಾಸಕ ಗುಬ್ಬಿ ಶ್ರೀನಿವಾಸ್‌ ಏಕವಚನದಲ್ಲಿ ಹರಿಹಾಯ್ದಿದ್ದಾರೆ.
ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಗುಬ್ಬಿ ಶ್ರೀನಿವಾಸ್‌ ಅವ ತುಮಕೂರಿನ ವಿದ್ಯಾನಗರದ ನಿವಾಸದ ಎದುರು ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಶ್ರೀನಿವಾಸ್‌ ಬೆಂಬಲಿಗರು ಬಂದಿದ್ದರಿಂದ ಗೊಂದಲ, ಗದ್ಧಲದ ವಾತಾವರಣ ನಿರ್ಮಾಣವಾಯಿತು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೇನೂ ಕ್ರಾಸ್‌ ಓಟಿಂಗ್‌ ಮಾಡಿಸಿದ್ದು ಇವರೇ ಎಂಬ ಅನುಮಾನವಿದೆ. ಏಕೆಂದರೆ ನಾವು ಮೊದಲಿನಿಂದಲೂ ಬಿಜೆಪಿ ವಿರೋಧಿಸಿಕೊಂಡು ಬಂದಿದ್ದೇವೆ. ಮತ ಹಾಕುವಾಗ ತೋರಿಸಿಯೇ ಹಾಕಿದ್ದೇನೆ ಎಂದರು.
ಇವನು ಯಾವುದರಲ್ಲಿಉತ್ತಮ ಇದ್ದಾನೆ. ಬೆಳಿಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾನೆ. ನನ್ನ ಮುಗಿಸಬೇಕು ಎಂದು ಕ್ರಾಸ್‌ ವೋಟಿಂಗ್‌ ಆರೋಪ ಮಾಡುತ್ತಿದ್ದಾರೆ. ನಾನು ಬ್ಯಾಲೆಟ್‌ ಪೇಪರ್‌ ತೋರಿಸಿದ್ದೀನಲ್ಲ. ಕಾಣಲಿಲ್ಲ ಅಂದರೆ ಕೇಳಬೇಕಿತ್ತು ಎಂದರು.
ಅವನಿಗೆ ತಾಕತ್ತಿದ್ದಂತೆ ನನ್ನ ಕ್ಷೇತ್ರದಲ್ಲಿ ಬಂದು ಗೆಲ್ಲಲಿ. ನಾನು ಮುಂದಿನ ಚುನಾವಣೆಯಲ್ಲಿ ಸೋತರೂ ಪರ್ವಾಗಿಲ್ಲ. ಜೆಡಿಎಸ್‌ ಅಭ್ಯರ್ಥಿಯನ್ನೂ ಸೋಲಿಸುವುದೇ ನನ್ನ ಗುರಿ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂಸಾಚಾರ ನಡೆಯದಂತೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ವಹಿಸಲು ಸೂಚನೆ- ಸಿಎಂ