Select Your Language

Notifications

webdunia
webdunia
webdunia
webdunia

ಆರ್‌ಎಸ್‌ಎಸ್‌ಗೆ ಶರಣಾದ್ರ ಸಿಎಂ ಬೊಮ್ಮಾಯಿ?

webdunia
ಬೆಂಗಳೂರು , ಮಂಗಳವಾರ, 16 ಆಗಸ್ಟ್ 2022 (11:43 IST)
ಬೆಂಗಳೂರು : ಆರ್ಎಸ್ಎಸ್ ವಿಚಾರ, ಆದರ್ಶ, ದೇಶಭಕ್ತಿಗೆ ತಲೆಬಾಗುತ್ತೇನೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದೆ.

ಸೋಮವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡ ಜಾತ್ರೆ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನಾನಾ ಚರ್ಚೆಗೆ ಗ್ರಾಸವಾಗಿದೆ.

ಆರ್ಎಸ್ಎಸ್ ಸಿದ್ಧಾಂತ ಮತ್ತು ಕಾರ್ಯಶೈಲಿಗೆ ಸಿಎಂ ಹೊಂದಿಕೊಂಡಿಲ್ಲ ಎಂಬ ಆರೋಪಗಳಿಗೆ ಟಾಂಗ್ ಕೊಡಲು ಅಮೃತ ಭಾರತಿಗೆ ಕರುನಾಡ ಜಾತ್ರೆ ವೇದಿಕೆ ಬಳಸಿಕೊಂಡಿದ್ದು, ಪಕ್ಷದೊಳಗೆ ಬೇರೆ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. 

ಆರ್ಎಸ್ಎಸ್ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಹೊಸ ಘೋಷಣೆ ಮಾಡಿಕೊಂಡಿದ್ದು, ನೆಹರು ವಿಚಾರದಲ್ಲಿ ಅಚ್ಚರಿಯ ಹೆಜ್ಜೆ ಇಟ್ಟಿದ್ದರ ಬಗ್ಗೆ ಭವಿಷ್ಯದ ರಾಜಕೀಯವನ್ನ ಅಳೆಯಲು ಶುರು ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಲೆ ಏರಿಕೆಯಿಂದ ಭಾರೀ ಲಾಭ!?