Select Your Language

Notifications

webdunia
webdunia
webdunia
webdunia

ರಶ್ಮಿಕಾ ಬಳಿಕ, ಅನನ್ಯಾ ಜೊತೆ ವಿಜಯ್ ಕ್ಲೋಸ್! ಶುರುವಾಯ್ತು ಗಾಸಿಪ್

ರಶ್ಮಿಕಾ ಬಳಿಕ, ಅನನ್ಯಾ ಜೊತೆ ವಿಜಯ್ ಕ್ಲೋಸ್! ಶುರುವಾಯ್ತು ಗಾಸಿಪ್
ಹೈದರಾಬಾದ್ , ಗುರುವಾರ, 18 ಆಗಸ್ಟ್ 2022 (10:30 IST)
ಹೈದರಾಬಾದ್: ಲೈಗರ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ಅನನ್ಯಾ ಪಾಂಡೆ-ವಿಜಯ್ ದೇವರಕೊಂಡ ಜೊತೆಯಾಗಿ ಪೂಜೆ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.

ವಿಜಯ್ ಮನೆಯಲ್ಲಿ ಅವರ ತಾಯಿಯೇ ಲೈಗರ್ ಸಿನಿಮಾ ಯಶಸ್ಸಿಗೆ ಪೂಜೆ ಮಾಡಿದ್ದು, ವಿಜಯ್ ಹಾಗೂ ಅನನ್ಯಾ ಜೊತೆಯಾಗಿ ಕೂತು ಪವಿತ್ರ ದಾರ ಕಟ್ಟಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಖುದ್ದು ವಿಜಯ್‍ ಹಂಚಿಕೊಂಡಿದ್ದರು.

ಅದರ ಬೆನ್ನಲ್ಲೇ ಇಬ್ಬರ ನಡುವೆ ಆಪ್ತತೆ ನೋಡಿ ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲು ರಶ್ಮಿಕಾ ಜೊತೆ ಕ್ಲೋಸ್ ಆಗಿದ್ದ ವಿಜಯ್ ಎರಡು ವರ್ಷಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದರು ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಇದೀಗ ಅನನ್ಯಾ ಜೊತೆ ವಿಜಯ್ ಹೆಸರು ಥಳುಕು ಹಾಕಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಟ ನಾಸರ್ ಗೆ ಶೂಟಿಂಗ್ ವೇಳೆ ಗಾಯ