ಮುಂಬೈ: ಲೈಗರ್ ಸಿನಿಮಾ ಮೂಲಕ ಬಾಲಿವುಡ್ ಗೂ ಕಾಲಿಡಲು ಸಿದ್ಧರಾಗಿರುವ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಈ ಹಿಂದೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನೀಡಿದ್ದ ಆಫರ್ ತಿರಸ್ಕರಿಸಿದ್ದರಂತೆ.
ಲೈಗರ್ ಸಿನಿಮಾವನ್ನು ಹಿಂದಿಯಲ್ಲಿ ಕರಣ್ ಜೋಹರ್ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಇದಕ್ಕೂ ಮೊದಲೇ ಅರ್ಜುನ್ ರೆಡ್ಡಿ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ವಿಜಯ್ ಗೆ ಹಿಂದಿಯಲ್ಲಿ ನಟಿಸಲು ಕರಣ್ ಆಫರ್ ನೀಡಿದ್ದರಂತೆ.
ಆದರೆ ಆಗ ನಾನು ಹಿಂದಿಗೆ ಹೋಗಲು ತಯಾರಾಗಿರಲಿಲ್ಲ. ಹೀಗಾಗಿ ಆಫರ್ ತಿರಸ್ಕರಿಸಿದ್ದೆ. ಆದರೆ ಈಗ ಲೈಗರ್ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಬೇಕೆಂದಾಗ ಕರಣ್ ನಮಗೆ ಒಳ್ಳೆಯ ಬೆಂಬಲ ಕೊಟ್ಟಿದ್ದಾರೆ ಎಂದಿದ್ದಾರೆ ವಿಜಯ್.