Publish Date: Thu, 11 Aug 2022 (09:50 IST)
Updated Date: Thu, 11 Aug 2022 (09:55 IST)
ಚೆನ್ನೈ: ಟಾಲಿವುಡ್ ನಟ ವಿಶಾಲ್ ಗೆ ಶೂಟಿಂಗ್ ವೇಳೆ ಅವಘಡವಾಗಿದ್ದು ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ವಿಶಾಲ್ ನಾಯಕರಾಗಿರುವ ಮಾರ್ಕ್ ಆಂಟೋನಿ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಘಟನೆ ನಡೆದಿದೆ. ಅವರ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇತ್ತೀಚೆಗಷ್ಟೇ ಅವರು ಶೂಟಿಂಗ್ ವೇಳೆ ನಡೆದಿದ್ದ ಗಾಯದಿಂದ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಅವಘಡವಾಗಿದೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.