ಹೈದರಾಬಾದ್: ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಆಂಧ್ರಪ್ರದೇಶದ ಕಣ‍್ಣಿನ ಆಸ್ಪತ್ರೆಯೊಂದಕ್ಕೆ 50 ಲಕ್ಷ ರೂ. ನೆರವು ನೀಡಿ ಸುದ್ದಿಯಾಗಿದ್ದಾರೆ.
ಆದರೆ ಪ್ರಶಾಂತ್ ನೀಲ್ ಒಳ್ಳೆಯ ಕೆಲಸ ಮಾಡಿದರೂ ಟ್ರೋಲ್ ಆಗಿದ್ದಾರೆ. ಪ್ರಶಾಂತ್ ಮೂಲತಃ ಕನ್ನಡದವರು. ಆದರೆ ಪ್ಯಾನ್ ಇಂಡಿಯಾ ನಿರ್ದೇಶಕರಾದ ಮೇಲೆ ಕರ್ನಾಟಕವನ್ನೇ ಮರೆತಿದ್ದಾರೆ ಎಂದು ಟ್ರೋಲ್ ಆಗಿದ್ದಾರೆ.
ಕರ್ನಾಟಕದಲ್ಲೇ ಸಾಕಷ್ಟು ಆಸ್ಪತ್ರೆಗಳು, ಶಾಲೆಗಳು ತೊಂದರೆಯಲ್ಲಿವೆ. ಮೊದಲು ಇಲ್ಲಿ ಸಹಾಯ ಮಾಡಿ. ಆದರೆ ಯಾಕೋ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಮೇಲೆ ಬೇರೆ ಭಾಷೆಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ಟ್ರೋಲ್ ಆಗಿದ್ದಾರೆ.