Select Your Language

Notifications

webdunia
webdunia
webdunia
webdunia

ನೆರವಿನ ಹಸ್ತಕ್ಕಾಗಿ ಎದಿರುನೋಡುತ್ತಿದ್ದಾರೆ ಕೆಜಿಎಫ್ ಚಾಚ ಹರೀಶ್ ರಾಯ್

ಹರೀಶ್ ರಾಯ್
ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ಚಾಚನಾಗಿ ಪ್ರಖ್ಯಾತರಾಗಿದ್ದ, ಕನ್ನಡದ ಅನೇಕ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿರುವ ನಟ ಹರೀಶ್ ರಾಯ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದು, ಸಹಾಯಕ್ಕಾಗಿ ಎದಿರು ನೋಡುತ್ತಿದ್ದಾರೆ.

ಕ್ಯಾನ್ಯರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಈಗ ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಗಿದೆ. ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ ಈಗಲೂ ರೇಡಿಯೇಷನ್ ಥೆರಪಿ ಮಾಡಿಸಬೇಕಿದೆ. ಈಗಲೂ ಸಂಪೂರ್ಣವಾಗಿ ಅವರು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ. ಆದರೆ ಅಷ್ಟೊಂದು ಭರಿಸುವ ಶಕ್ತಿ ಅವರಿಗಿಲ್ಲ. ಈ ಬಗ್ಗೆ ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಸಹಾಯ ಮಾಡಲು ಇಚ್ಚಿಸುವವರು 9606960565 ಸಂಖ್ಯೆಗೆ ಗೂಗಲ್ ಪೇ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮಾನ್ವಿತಾ ಕಾಮತ್ ತಾಯಿಗೆ ನೆರವಾದ ಸೋನು ಸೂದ್