ಬೆಂಗಳೂರು: ನಟಿ ಮೇಘನಾ ರಾಜ್ ಇತ್ತೀಚೆಗೆ ಎರಡನೇ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಮೇಘನಾ ಅವೆಲ್ಲಾ ವದಂತಿಗಳಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಮೇಘನಾ ತಮ್ಮ ಕೈಯಲ್ಲಿ ಚಿರು ಮತ್ತು ರಾಯನ್ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಮೇಘನಾ ಈ ಮೂಲಕ ತಮ್ಮ ಜೀವನದಲ್ಲಿ ಇವರಿಬ್ಬರೇ ಎಲ್ಲಾ ಎಂದು ಮತ್ತೆ ಸಾರಿದ್ದಾರೆ.
ಫೋಟೋ ಜೊತೆಗೆ ಇವರಿಬ್ಬರೂ ನನಗೆ ಎಂದೆಂದಿಗೂ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ತಮ್ಮ ಜೀವನದಲ್ಲಿ ಇವರೇ ಮುಖ್ಯ ಎಂದು ಸೂಚ್ಯವಾಗಿ ಹೇಳಿದ್ದಾರೆ.