ಸೃಜನ್ ಲೋಕೇಶ್ ಮಜಾ ಟಾಕೀಸ್ ಬಂದ್!

ಮಂಗಳವಾರ, 10 ಅಕ್ಟೋಬರ್ 2017 (10:02 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಕಾಮಿಡಿ ಶೋ ಮಜಾ ಟಾಕೀಸ್ ಮುಕ್ತಾಯ ಕಾಣುತ್ತಿದೆ. ಈ ಬಗ್ಗೆ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

 
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಶನಿವಾರ ಸಂಜೆ ಕೊನೆಯ ಸಂಚಿಕೆ ಚಿತ್ರೀಕರಿಸಲಾಗಿದೆ. ಎರಡು ವರ್ಷಗಳ ಹಿಂದೆ ಆರಂಭವಾಗಿದ್ದ ಮಜಾ ಟಾಕೀಸ್ ವೀಕೆಂಡ್ ಗಳಲ್ಲಿ ವೀಕ್ಷಕರನ್ನು ಸೆರೆಹಿಡಿದಿತ್ತು.

ಕನ್ನಡದ ಹಲವು ಸ್ಟಾರ್ ನಟರು, ಸಾಹಿತಿಗಳು, ಕಾರ್ಯಕ್ರಮಕ್ಕೆ ಬಂದು ತಮ್ಮ ಸಿನಿಮಾಗಳ ಪ್ರಮೋಷನ್ ಮಾಡುತ್ತಿದ್ದರು. ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರು ಮಜಾ ಟಾಕೀಸ್ ಗೆ ಬಂದಿದ್ದರು. ವೀಕ್ಷಕರೂ ಈ ಶೋವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಮಜಾ ಟಾಕೀಸ್ ಮುಕ್ತಾಯಗೊಳ್ಳುತ್ತಿರುವುದು ವೀಕ್ಷಕರಿಗೆ ಭಾರೀ ನಿರಾಸೆ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿವಾದಗಳ ನಂತರ ಕನ್ನಡದ ಬಗ್ಗೆ ‘ಹೆಮ್ಮೆ’ಯ ಮಾತನಾಡಿದ ಶ್ರುತಿ ಹಾಸನ್