Select Your Language

Notifications

webdunia
webdunia
webdunia
webdunia

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು
Bangalore , ಬುಧವಾರ, 8 ಮಾರ್ಚ್ 2017 (09:19 IST)
ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಮಜಾ ಟಾಕೀಸ್‍ನಲ್ಲಿ ಸಾಕಷ್ಟು ಸಿನಿಮಾ ತಾರೆಯರು ಅತಿಥಿಗಳಾಗಿ ಆಗಮಿಸಿ, ತಾವೂ ನಕ್ಕು, ನೆರೆದವರನ್ನೂ ನಗಿಸಿ ವೀಕ್ಷಕರನ್ನು ರಂಜಿಸಿರುವುದನ್ನು ನಾವು ನೋಡಿದ್ದೇವೆ. ಈ ಬಾರಿಯ ಮಹಿಳಾ ದಿನಾಚರಣೆಯ ಸಲುವಾಗಿ ಮಜಾ ಟಾಕೀಸ್‍ಗೆ ಒಬ್ಬ ವಿಶೇಷ ಅತಿಥಿ ಆಗಮಿಸಿದ್ದಾರೆ.
 
ಅವರೇ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿದ್ದ ಹಾಲಿ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ. ಶೋಭಾ ಒಬ್ಬ ಗಂಭೀರ ರಾಜಕಾರಣಿ. ಪುರುಷ ರಾಜಕಾರಣಿಗಳೇ ಮುಂಚೂಣಿಯಲ್ಲಿರುವ ರಾಜಕಾರಣದಲ್ಲಿ ಇರುವ ಮಹಿಳೆಯರ ಸಂಖ್ಯೆಯೇ ಕಡಿಮೆ. ಇದ್ದರೂ ಪುರುಷ ರಾಜಕಾರಣಿಗಳಿಗೆ ಸರಿಸಾಟಿಯಾಗಿ ಕೆಲಸ ಮಾಡುವವರು ಬಹಳ ವಿರಳ. 
 
ಅಂತಹ ಗಟ್ಟಿಗತ್ತಿ ರಾಜಕಾರಣಿ ಶೋಭಾ ಕರಂದ್ಲಾಜೆ. ಯಾವತ್ತೂ ಗಂಭೀರವಾಗಿರುವ ಇವರ ಹಾಸ್ಯದ ಮುಖ ನೋಡಿದವರು ಕಡಿಮೆ. ಅವರ ಈ ಮುಖವನ್ನು ಕನ್ನಡದ ಜನತೆಗೆ ಪರಿಚಯಿಸಲಿದೆ ಈ ಬಾರಿಯ ಮಜಾ ಟಾಕೀಸ್‍ನ ಎಪಿಸೋಡ್.
 
ಈ ವಿಶೇಷ ಸಂಚಿಕೆಗೆ ಆಂಬುಲನ್ಸ್ ಡ್ರೈವರ್, ಕಂಡಕ್ಟರ್, ಹೂ ಕಟ್ಟುವವರು, ವ್ಯವಸಾಯ ಮಾಡುವವರು ಹೀಗೆ ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡ ಮಹಿಳಾ ಬಳಗವೇ 
ಹಾಜರಾಗಿತ್ತು. ಮಹಿಳಾ ದಿನಾಚರಣೆಯ ಅಂಗವಾಗಿ ಇಡೀ ಮಜಾ ಟಾಕೀಸ್ ಸೆಟ್ ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು.
 
ಶೋಭಾ ಕರಂದ್ಲಾಜೆಯವರಿಗೆ ಹೂ ಕಟ್ಟೋಕೆ ಬರುತ್ತಾ ಅಂತ ಸವಾಲು ಕೊಟ್ಟಳು ಒಬ್ಬಳು ಹೂ ಕಟ್ಟೋ ಹೆಣ್ಣು ಮಗಳು. ಇನ್ನೊಬ್ಬ ಮಹಿಳೆ ಅಡುಗೆ ರೆಸಿಪಿ ಕೇಳಿ ತಿಳಿದುಕೊಂಡಳು, ಅಷ್ಟೇ ಅಲ್ಲದೇ ನಮ್ಮ 'ಒನ್ ಆಂಡ್ ಒನ್ಲಿ ವರಲಕ್ಷ್ಮೀ' ಸಿನಿಮಾ ಡೈಲಾಗ್ ಹೇಳಿಸಿದರು. ಮತ್ತು ರಾಜಕೀಯ ಪಕ್ಷದ ಪ್ರಚಾರ ಮಾಡುವುದು ಹೇಗೆ ಎಂಬುದನ್ನು ವರಲಕ್ಷ್ಮೀ ಮತ್ತು ಶ್ವೇತಾ, 
ಶೋಭಾ ಅವರಿಂದ ತಿಳಿದುಕೊಂಡರು. 
 
ಅಷ್ಟೇ ಅಲ್ಲದೇ ಹಾಡಿ, ಕುಣಿದ ಶೋಭಾ ಕರಂದ್ಲಾಜೆಯವರ ವೈಯಕ್ತಿಕ ಜೀವನ, ಅವರ ಬಾಲ್ಯದ ನೆನಪು ಬಿಚ್ಚಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ಪಾರ್ವತಮ್ಮ ರಾಜಕುಮಾರ್