Publish Date: Fri, 18 Aug 2017 (10:44 IST)
Updated Date: Fri, 18 Aug 2017 (11:10 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಸೃಜನ್ ಲೋಕೇಶ್ ಹೆಸರು ವಿವಾದಿತ ಸುದ್ದಿಯೊಂದರಲ್ಲಿ ಪ್ರಕಟವಾಗಿ ವಿವಾದಕ್ಕೀಡಾಗಿದೆ.
ಸೃಜನ್ ಎಂಬ ತೆಲುಗು ನಟನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಚಲಿಸುತ್ತಿದ್ದ ಕಾರಿನಲ್ಲಿ ತೆಲುಗು ನಟ ಸೃಜನ್ ಮತ್ತು ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವ ನಟಿ ಒಬ್ಬಾಕೆ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಮಾಧ್ಯಮವೊಂದರಲ್ಲಿ ತೆಲುಗು ನಟನ ಬದಲು ಸೃಜನ್ ಲೋಕೇಶ್ ಹೆಸರು, ಫೋಟೋ ಬಳಕೆಯಾಗಿತ್ತು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಕಿಡಿ ಕಾರಿರುವ ಸೃಜನ್ ನನ್ನನ್ನು ಒಂದು ಮಾತು ಸ್ಪಷ್ಟನೆ ಕೇಳದೇ ಫೋಟೋ ಬಳಸಿದ್ದು ಹೇಗೆ? ಸೃಜನ್ ಎಂದು ಹೆಸರಿಟ್ಟುಕೊಂಡವರೆಲ್ಲಾ ನಾನಲ್ಲ. ಇದರಿಂದ ನನಗೆ ತೀರಾ ಬೇಸರವಾಗಿದೆ ಎಂದು ಕಿಡಿ ಕಾರಿದ್ದಾರೆ.
ನವರಸನಾಯಕ ಜಗ್ಗೇಶ್ ಕೂಡಾ ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಯಾವ ಪುರುಷಾರ್ಥಕ್ಕೆ ಈ ರೀತಿ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.