Publish Date: Mon, 26 Jun 2017 (10:49 IST)
Updated Date: Mon, 26 Jun 2017 (10:51 IST)
ರಾಜ್ ಕೋಟ್: ಇತ್ತೀಚೆಗೆ ಅಪ್ಪ ಮಗಳ ಮೇಲೆ ಅತ್ಯಾಚಾರ ನಡೆಸುವ ಪ್ರಕರಣಗಳು ಬೆಳಕಿಗೆ ಬೀಳುತ್ತಿವೆ. ರಾಜ್ ಕೋಟ್ ಬಳಿ ಗ್ರಾಮವೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಆದರೆ ಇಲ್ಲಿ ಅತ್ಯಾಚಾರವೆಸಗಿದ ಅಪ್ಪನನ್ನೇ ಮಗ ಕೊಂದು ಹಾಕಿದ್ದಾನೆ. ವಿವಾಹಿತ ಅಕ್ಕ ಗಂಡನ ಮನೆಯಲ್ಲಿ ಮನಸ್ತಾಪವಿದ್ದ ಕಾರಣ ತವರಿಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಮನೆ ಕಡೆ ತಲೆ ಹಾಕುವ ಅಪ್ಪ ಮಗಳ ಮೇಲೆ ಭಾನುವಾರ ಎರಡು ಬಾರಿ ಅತ್ಯಾಚಾರ ಎಸಗಿದ್ದ ಎನ್ನುವುದನ್ನು ಸಂತ್ರಸ್ತ ಮಗಳೇ ತನ್ನ ಸಹೋದರನಿಗೆ ತಿಳಿಸಿದ್ದಳು.
ಇದರಿಂದ ಸಿಟ್ಟಿಗೆದ್ದ 19 ವರ್ಷದ ಸಹೋದರ ಅಪ್ಪನ ಜತೆಗೆ ವಾಗ್ವಾದ ನಡೆಸಿದ್ದಲ್ಲದೆ, ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ