Select Your Language

Notifications

webdunia
webdunia
webdunia
webdunia

16 ರ ಬಾಲಕನನ್ನುಒಂದು ವರ್ಷ ಅತ್ಯಾಚಾರ ಮಾಡಿದ ಯುವಕರ ಗುಂಪು!

ಅತ್ಯಾಚಾರ ಪ್ರಕರಣ
ಮುಂಬೈ , ಗುರುವಾರ, 3 ಆಗಸ್ಟ್ 2017 (11:05 IST)
ಮುಂಬೈ: ಇದು ನಿಜಕ್ಕೂ ಸಮಾಜವೇ ಬೆಚ್ಚಿಬೀಳುವ ಘಟನೆ. 16 ವರ್ಷದ ಬಾಲಕನೋರ್ವ 15 ಮಂದಿ ತನ್ನನ್ನು ಒಂದು ವರ್ಷ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿದ್ದಾನೆ.

 
15 ಮಂದಿ ಯುವಕರು ತನ್ನನ್ನು ಬೆದರಿಸಿ, ಲೈಂಗಿಕವಾಗಿ ಬಳಸಿಕೊಂಡರು ಎಂದು ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಯಾರಿಗೂ ಹೇಳದಂತೆ ಕಾಮುಕರು ಲೈಂಗಿಕ ಕಿರುಕುಳದ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ನೋವು ತಡೆಯಲಾಗದೆ ಬಾಲಕ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾನೆ.

ಇದಾದ ಮೇಲೆ ಪೊಲೀಸರಿಗೆ  ದೂರು ನೀಡಲಾಗಿದೆ. ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಲೈಂಗಿಕ ಕಿರುಕುಳವಾಗಿದ್ದು ನಿಜ ಎಂದು ಪತ್ತೆ ಮಾಡಿದ್ದಾರೆ. ಈ ಸಂಬಂಧ 15 ರಿಂದ 17 ವರ್ಷದೊಳಗಿನ ಯುವಕರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುತ್ತು ಕೇಳಿದವನಿಗೆ ಮಹಿಳೆ ಕೊಟ್ಟ ಶಿಕ್ಷೆ ಏನು ಗೊತ್ತಾ?