Select Your Language

Notifications

webdunia
webdunia
webdunia
webdunia

ಅ. 22ರಂದು ಚಿರು ಸರ್ಜಾ, ಮೇಘನಾ ರಾಜ್ ನಿಶ್ಚಿತಾರ್ಥ

Chiranjeevi sarja
ಬೆಂಗಳೂರು , ಸೋಮವಾರ, 9 ಅಕ್ಟೋಬರ್ 2017 (16:53 IST)
ಬೆಂಗಳೂರು: ಚಂದನವನದ ತಾರಾ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಡಿದೆ.

ಬಹುಕಾಲದಿಂದ ಸ್ನೇಹಿತರಾಗಿದ್ದ ಇವರು, 2 ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅಕ್ಟೋಬರ್ 22ರಂದು ನಟ ಚಿರು ಸರ್ಜಾ ಮತ್ತು ನಟಿ ಮೇಘನಾ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆಯಂತೆ. ಡಿಸೆಂಬರ್ 6ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

ಚಿರು ಸರ್ಜಾ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾರವರ ಸಹೋದರಿಯ ಮಗ. ಇನ್ನು ಮೇಘನಾ ರಾಜ್
ಹಿರಿಯ ನಟರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಯ ಏಕೈಕ ಮಗಳು. ಚಿರು ಮತ್ತು ಮೇಘನಾ ಜೋಡಿ ಈ ಹಿಂದೆ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿರ್ಮಾಣದ `ಆಟಗಾರ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕಾಶ್ ರೈಗೆ ಸದಾನಂದ ಗೌಡರ ತಿರುಗೇಟು