ಬೆಂಗಳೂರು: ಕನ್ನಡ ಸೀರಿಯಲ್ ಇತಿಹಾಸದಲ್ಲೇ ಕರೆಕ್ಟ್ ಆಗಿ ಡೆಲಿವರಿ ಆದ ಮೊದಲ ಮಗು ಎಂದರೆ ಇದುವೇ ಎಂದು ಈಗ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ತುಳಸಿ ಡೆಲಿವರಿ ವಿಚಾರ ಟ್ರೋಲ್ ಆಗುತ್ತಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿ ಹೀರೋಯಿನ್. ತುಳಸಿ ಎನ್ನುವ ಮಧ್ಯವಯಸ್ಕ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಅವರೀಗ ಗರ್ಭಿಣಿಯಾಗಿ ಡೆಲಿವರಿಗಾಗಿ ಆಸ್ಪತ್ರೆಗೆ ಬಂದಿರುತ್ತಾರೆ.
ಎಂದಿನಂತೆ ಸಾವು-ಬದುಕಿನ ನಡುವಿನ ಹೋರಾಟ ಅದೆಲ್ಲಾ ಮಾಮೂಲಾಗಿಯೇ ಇಲ್ಲೂ ಇದೆ. ಆದರೆ ಯಾವುದೇ ಅನಾಹುತವಾಗದೇ ತುಳಸಿ ಮಗುವಿನಗೆ ಜನ್ಮ ನೀಡುತ್ತಾಳೆ. ಈ ಪ್ರೋಮೋ ನೋಡಿದ ಪ್ರೇಕ್ಷಕರು ಈಗ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಬಹುಶಃ ಕನ್ನಡ ಸೀರಿಯಲ್ ಇತಿಹಾಸದಲ್ಲೇ ಯಶಸ್ವಿಯಾಗಿ ಡೆಲಿವರಿ ಆದ ಮೊದಲ ಮಗು ಇದೇ ಆಗಿರಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಹೊಟ್ಟೆಯೇ ಇಲ್ಲದೇ ಇದ್ದರೂ ತುಳಸಿಗೆ ಡೆಲಿವರಿ ಹೇಗಾಯ್ತು ಎಂದು ಕಾಲೆಳೆದಿದ್ದಾರೆ. ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಹೀರೋಯಿನ್ ಗರ್ಭಿಣಿ ಆದರೂ ಒಂದೋ ಅಬಾರ್ಷನ್ ಆಗಿಬಿಡುತ್ತದೆ, ಇಲ್ಲವೇ ವಿಲನ್ ಗಳ ಕುತಂತ್ರದಿಂದ ಮಗು ಸಾಯುತ್ತದೆ. ಆದರೆ ಇಲ್ಲಿ ಮಗು ಬದುಕಿರುವುದನ್ನು ನೋಡಿ ವೀಕ್ಷಕರು ಸಖತ್ ಟ್ರೋಲ್ ಮಾಡಿದ್ದಾರೆ.