ಬಿಗ್‌ಬಾಸ್ ಸೀಸನ್ 11ರಲ್ಲಿ ತಮ್ಮ ಸ್ನೇಹದಿಂದಲೇ ಗುರುತಿಸಿಕೊಂಡಿದ್ದ ಕಿರುತೆರೆ ನಟಿ ಐಶ್ವರ್ಯಾ, ಮೋಕ್ಷಿತಾ ಹಾಗೂ ನಟ ಶಿಶಿರ್ ಅವರು ದೊಡ್ಮನೆಯಿಂದ ಬಂದ್ಮೇಲೂ ಹಾಗೆಯೇ ಇದ್ದಾರೆ. ಈಚೆಗೆ ಮೂವರು ದಕ್ಷಿಣ ಭಾರತದ ಫವರ್ ಫುಲ್ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ದೇವಸ್ಥಾನ ಭೇಟಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಮೂವರು ವಿಶೇಷ ಪೂಜೆ ಸಲ್ಲಿಸಿ, ಕೆಲ ಹೊತ್ತು ಕಾಲ ಕಳೆದಿದ್ದಾರೆ.
ಈಚೆಗೆ ಮೂವರು ಕೂಡಾ ಬಿಗ್‌ಬಾಸ್ ಸ್ಪರ್ದಿ ರಂಜಿತ್ ಅವರ ಎಂಗೇಜ್ಮೆಂಟ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿಯೂ ಕೂಡಾ ಐಶ್ವರ್ಯಾ ಕಾಲೆಳೆದ ಶಿಶಿರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೊಡ್ಮನೆಯಲ್ಲಿ ತಮ್ಮ ಸ್ನೇಹದಿಂದಲೇ ಗುರುತಿಸಿಕೊಂಡಿದ್ದ ಮೋಕ್ಷಿತಾ, ಐಶ್ವರ್ಯಾ ಹಾಗೂ ಶಿಶಿರ್ ಆಚೆ ಬಂದ್ಮೇಲೂ ಅದೇ ಬಾಂಡಿಂಗ್ ಅನ್ನು ಮುಂದುವರೆಸಿದ್ದಾರೆ.
ಮೋಕ್ಷಿತಾ ಅವರು ತಮ್ಮ ಸ್ನೇಹವನ್ನು ಶಿಶಿರ್ ಹಾಗೂ ಐಶ್ವರ್ಯಾ ಜತೆ ಮುಂದುವರೆಸುವುದಾಗಿ ಹೇಳಿಕೊಂಡಿದ್ದರು.