ಬೆಂಗಳೂರು: ಚಿನ್ನ ಕಳ್ಳಸಾಗಣಿಕೆ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ನಿಂದ ಇತ್ತೀಚೆಗೆ ಮದುವೆಯಾದ ಹಿರಿಯ ನಟಿ ಜಯಮಾಲ ಪುತ್ರಿ ಸೌಂದರ್ಯಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಜಯಮಾಲ ಮಗಳು ಸೌಂದರ್ಯ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಮದುವೆಯಲ್ಲಿ ರನ್ಯಾ ರಾವ್ ಓಡಾಡಿದ ಫೋಟೋಗಳು, ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ಅಷ್ಟಕ್ಕೂ ಜಯಮಾಲ ಪುತ್ರಿಗೂ ರನ್ಯಾಗೂ ಇರುವ ಸಂಬಂಧವೇನು ಗೊತ್ತಾ?
ರನ್ಯಾ ರಾವ್ ಎಂದರೆ ಜಯಮಾಲ ಪುತ್ರಿ ಸೌಂದರ್ಯ ಗಂಡನ ಸಹೋದರನ ಪತ್ನಿ ಎಂಬುದು ಈಗ ಬಯಲಾಗಿದೆ. ಹೀಗಾಗಿ ರನ್ಯಾ ದೆಸೆಯಿಂದ ಜಯಮಾಲ ಅಳಿಯ ಮತ್ತು ಮಗಳೂ ವಿಚಾರಣೆಗೊಳಪಡುವ ಸಾಧ್ಯತೆಗಳಿವೆ.
ಈಗಾಗಲೇ ರನ್ಯಾ ರಾವ್ ಪತಿಯನ್ನು ವಿಚಾರಣೆ ನಡೆಸಲಾಗಿದೆ. ಆದರೆ ಬಂಧಿಸದಂತೆ ಅವರು ಕೋರ್ಟ್ ನಿಂದ ಸ್ಟೇ ತಂದಿದ್ದರು. ರನ್ಯಾ ರಾವ್ ರನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದು, ಚಿನ್ನ ಸಾಗಿಸಿರುವುದನ್ನು ಒಪ್ಪಿಕೊಂಡಿದ್ದಾಳೆ.