ಬೆಂಗಳೂರು: ಐಸಿಸಿ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಕೆಟರ್ ಕೆ ಎಲ್ ರಾಹುಲ್ ಅವರನ್ನು ತಾಯ್ನಾಡಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಭಾರತಕ್ಕೆ ವಾಪಾಸ್ಸಾಗಿರುವ ಕೆಎಲ್ ರಾಹುಲ್ ಅವರು ಇದೀಗ ಪತ್ನಿ ಜತೆ ಸಮಯ ಕಳೆಯುತ್ತಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೆಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಅವರು ಇದೀಗ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಐಸಿಸಿ ಚಾಂಪಿಯನ್ ಟ್ರೋಫಿಯನ್ನು ಗೆದ್ದುವಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಎಲ್. ರಾಹುಲ್ ಇದುವರೆಗೂ ಭಾರತಕ್ಕಾಗಿ ಆಡುವಲ್ಲಿ ನಿರತರಾಗಿದ್ದರು. ಇದೀಗ ದುಬೈನಿಂದ ವಾಪಾಸ್ಸಾಗಿರುವ ರಾಹುಲ್ ತಮ್ಮ ಪತ್ನಿ ಜತೆಗೆ ಫೋಟೋಗೆ ಪೋಸ್ ನೀಡಿದ್ದಾರೆ.
ಈ ಫೋಟೋಗಳನ್ನು ಅಥಿಯಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಕ್ರಿಕೆಟಿಗ ಪತ್ನಿಯ ಮಡಿಲಿನಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ "ಓಹ್, ಬೇಬಿ" ಎಂದು ಬರೆದುಕೊಂಡಿದ್ದಾರೆ.