ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಈ ಕೃತ್ಯಕ್ಕೆ ಟ್ರೈನಿಂಗ್ ಪಡೆದಿದ್ದು ಎಲ್ಲಿ ಎಂದು ಈಗ ಬಯಲಾಗಿದೆ.
ದುಬೈಗೆ ಆಗಾಗ ಟ್ರಿಪ್ ಹೋಗುತ್ತಿದ್ದ ರನ್ಯಾ ರಾವ್ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದಳು. ಹೊಟ್ಟೆ, ತೊಡೆ, ಮೊಣಕಾಲಿನ ಕೆಳಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡು ತರುತ್ತಿದ್ದಳು ಎಂಬ ಅಂಶ ಬೆಳಕಿಗೆ ಬಂದಿತ್ತು.
ಈಗ ಆಕೆ ಯಾರಿಗೂ ಗೊತ್ತಾಗದ ಹಾಗೆ ಇಷ್ಟು ಸುಲಭವಾಗಿ ಚಿನ್ನ ಸಾಗಣಿಕೆ ಮಾಡಲು ಕಲಿತಿದ್ದು ಎಲ್ಲಿಂದ ಎಂಬ ವಿಚಾರ ಈಗ ಬಯಲಾಗಿದೆ. ಇದೀಗ ಕಂದಾಯ ಗುಪ್ತಚರ ಇಲಾಖೆ ವಿಚಾರಣೆಯಲ್ಲಿ ರನ್ಯಾ ತಾನು ಚಿನ್ನ ಕಳ್ಳಸಾಗಣಿಕೆ ಮಾಡಿರುವುದನ್ನು ಒಪ್ಪಿದ್ದಾಳೆ. ಆದರೆ ಇದೇ ಮೊದಲ ಬಾರಿಗೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.
ಚಿನ್ನವನ್ನು ಮರೆ ಮಾಚಲು ಟ್ರೈನಿಂಗ್ ಕೊಡಲು ಕೆಲವು ಅಪರಿಚಿತ ಕರೆಗಳು ಬರುತ್ತಿದ್ದವು ಮತ್ತು ಯೂ ಟ್ಯೂಬ್ ನಿಂದ ಕಲಿತಿರುವುದಾಗಿ ಹೇಳಿಕೊಂಡಿದ್ದಾಳೆ. ಆಕೆ ಹೇಳಿದ ವಿಚಾರಗಳು ನಿಜಕ್ಕೂ ಶಾಕಿಂಗ್ ಆಗಿದೆ.