Select Your Language

Notifications

webdunia
webdunia
webdunia
webdunia

Gold Smuggling Case: ರನ್ಯಾ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಬೆಂಗಳೂರು

Sampriya

ಬೆಂಗಳೂರು , ಗುರುವಾರ, 13 ಮಾರ್ಚ್ 2025 (15:21 IST)
ಬೆಂಗಳೂರು: ದಿನಕ್ಕೊಂದು ಟ್ವಿಸ್ಟ್‌ ಸಿಗುತ್ತಿರುವ ನಟಿ ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಗೆ ಇದೀಗ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದ್ದು, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಕರಣದಲ್ಲಿ ಇಸಿಐಆರ್‌ ದಾಖಲಿಸಿಕೊಂಡು ಇಡಿ, ಚಿನ್ನ ಕಳ್ಳಸಾಗಣೆ ವೇಳೆ ಹಣದ ಅಕ್ರಮ ವರ್ಗಾವಣೆ ಆಗಿರುವ ಆಯಾಮದಲ್ಲಿ ತನಿಖೆ ಆರಂಭಿಸಿದೆ.

ಇಡಿ ನಟಿ ರನ್ಯಾ ರಾವ್ ಮನೆ, ಉದ್ಯಮಿ ತರುಣ್ ರಾಜ್‌, ಆರ್‌ಟಿ ನಗರದಲ್ಲಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿರುವ ಸ್ವಾಮೀಜಿ ಮತ್ತು ಕೆಲ ಪೊಲೀಸ್ ಅಧಿಕಾರಿಗಳಲ್ಲಿ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದುಬೈನಿಂದ ಅಕ್ರಮವಾಗಿ 12ಕೋಟಿ ಮೌಲ್ಯದ 15ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ  ವೇಳೆ ಬೆಂಗಳೂರು ವಿಮಾನನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯೂಟ್‌ ಮೆಟರ್ನಿಟಿ ಫೋಟೋ ಶೂಟ್ ಹಂಚಿಕೊಂಡ ಅಥಿಯಾ- ಕೆಎಲ್‌ ರಾಹುಲ್‌