ರಜನೀಕಾಂತ್ ಪುತ್ರಿ ಸೌಂದರ್ಯ ಅದ್ಧೂರಿ ಮದುವೆ ಇಂದು

ಸೋಮವಾರ, 11 ಫೆಬ್ರವರಿ 2019 (11:10 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ದ್ವಿತೀಯ ಪುತ್ರಿ ಸೌಂದರ್ಯ ಮತ್ತು ಉದ್ಯಮಿ ವಿಶಾಖನ್ ಮದುವೆ ಇಂದು ಚೆನ್ನೈಯ ಪಂಚತಾರಾ ಹೋಟೆಲ್ ನಲ್ಲಿ ನಡೆಯುತ್ತಿದೆ.


ಈಗಾಗಲೇ ಎರಡೂ ಕುಟುಂಬಗಳು, ವಧು-ವರರ ಸಮೇತ ಮಂಟಪಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಚೆನ್ನೈಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಮದುವೆ ನಡೆಯುತ್ತಿದೆ. ರಜನೀಕಾಂತ್ ಛತ್ರಕ್ಕೆ ತೆರಳುವ ಮೊದಲು ಅಭಿಮಾನಿಗಳತ್ತ ಕೈ ಬೀಸುತ್ತಿರುವ ಫೋಟೋಗಳು ವೈರಲ್ ಆಗಿದೆ.

ಅಂದ ಹಾಗೆ ಸೌಂದರ್ಯ ಮತ್ತು ವಿಶಾಖನ್ ಇಬ್ಬರಿಗೂ ಇದು ಎರಡನೇ ಮದುವೆ. ರಜನಿ ಪುತ್ರಿಯ ಮದುವೆಗೆ ಸಿನಿಮಾ ಕ್ಷೇತ್ರದ ಘಟಾನುಘಟಿಗಳು ಆಗಮಿಸುವ ನಿರೀಕ್ಷೆಯಿದೆ.  ದಕ್ಷಿಣ ಭಾರತೀಯ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಎಂಥಾ ಗಂಡ ಸಿಕ್ಯಾನವ್ವ ನಿಂಗೆ?’ ರಾಧಿಕಾ ಪಂಡಿತ್ ಗೆ ಅಭಿಮಾನಿಗಳು ಹೀಗೇಕೆ ಹೇಳಿದ್ರು?!