ಈ ವಸ್ತುಗಳು ನಿಮಗೆ ಉಡುಗರೆಯಾಗಿ ಸಿಕ್ಕರೆ ಒಲಿಯುತ್ತೆ ಅದೃಷ್ಟ

ಸೋಮವಾರ, 11 ಫೆಬ್ರವರಿ 2019 (06:30 IST)
ಬೆಂಗಳೂರು : ಮದುವೆ, ಗೃಹ ಪ್ರವೇಶ, ಇನ್ನಿತರ ಶುಭ ಸಮಾರಂಭಗಳಲ್ಲಿ ನಿಮ್ಮ  ಪ್ರೀತಿ ಪಾತ್ರರಿಗೆ ಬೇಕಾಬಿಟ್ಟಿ ಉಡುಗೊರೆ ನೀಡುವ ಬದಲು ಅವರ ಮನಸ್ಸು ಖುಷಿಗೊಳ್ಳುವ ಜೊತೆಗೆ ಮನೆಯಲ್ಲಿ ಏಳ್ಗೆಯಾಗುವಂತಹ, ಆರ್ಥಿಕ ವೃದ್ಧಿ, ಸುಖ, ಸಂತೋಷ ನೀಡುವಂತಹ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಉತ್ತಮ ಎನ್ನಲಾಗಿದೆ.. ಆ ಉಡುಗೊರೆಗಳು ಯಾವುದೆಂಬುದನ್ನು ತಿಳಿಯೋಣ.


ವಾಸ್ತುಶಾಸ್ತ್ರದ ಪ್ರಕಾರ ಕಲಾತ್ಮಕ ಲೋಹದಿಂದ ಮಾಡಿದ ಆನೆ ಅಥವಾ ಪೇಂಟ್ ಮಾಡಿದ ಆನೆಯ ಚಿತ್ರ ಮನೆಯಲ್ಲಿದ್ದರೆ ಸಂತೋಷ, ಸಮೃದ್ಧಿ, ಅಭ್ಯುದಯ, ಅದೃಷ್ಟವನ್ನು ತರುತ್ತದೆ. ಆದ್ದರಿಂದ ಅದನ್ನು ಉಡುಗೊರೆಯಾಗಿ ಕೊಟ್ಟರೆ ಉತ್ತಮ.
ಹಾಗೆ ಬಿಳಿಯ ಕುದುರೆ ಚಿತ್ರ ಮಂಗಳಕರ ಎಂದು ಭಾವಿಸಲಾಗಿದೆ. ಗೃಹ ಪ್ರವೇಶ ಅಥವಾ ಮಂಗಳಕಾರ್ಯಕ್ಕೆ ಹೋದಾಗ ಬಿಳಿ ಬಣ್ಣದ ಕುದುರೆ ಚಿತ್ರವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಮನೆಯಲ್ಲಿ ಆದಾಯ ಹಾಗೂ ಸಂತೋಷದಲ್ಲಿ ಹೆಚ್ಚಳವಾಗುತ್ತದೆ


ದ್ವಿಮುಖ ಗಣೇಶ ಮನೆಯಲ್ಲಿ ಸದಾ ಸಂತೋಷ ನೆಲೆಸಲು ಕಾರಣನಾಗ್ತಾನೆ. ಈ ಮೂರ್ತಿಯನ್ನು ಪ್ರವೇಶ ದ್ವಾರದ ಬಳಿ ಇಡುವುದು ಉತ್ತಮ. ದ್ವಿಮುಖ ಗಣೇಶ ಮೂರ್ತಿಯನ್ನು ಉಡುಗೊರೆಯಾಗಿ ನೀಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಗೋಡೆಗೆ ಯಾವ ಬಣ್ಣ ಹಚ್ಚಬೇಕಂತೆ ಗೊತ್ತಾ?