Select Your Language

Notifications

webdunia
webdunia
webdunia
webdunia

ಮದುವೆಯಾಗಿರೋ ಸೆಲೆಬ್ರಿಟಿಗಳು ಹೇಗಿರಬೇಕು ಎಂದು ಸೋನಲ್ ನೋಡಿ ಕಲಿಯಬೇಕು

sonal monteiro, Tarun Sudhir Sonal Honeymoon, Sonal Monteiro In Saree,

Sampriya

ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2024 (19:35 IST)
photo Courtesy Instagram
ಮದುವೆಯ ಒಂದೊಂದೆ ಕ್ಷಣಗಳ ನೆನಪಿನೊಂದಿಗೆ  ಫೋಟೋಗಳನ್ನು ಶೇರ್ ಮಾಡುತ್ತಿರುವ ನಟಿ ಸೋನಲ್ ಮೊಂಥೆರೋ ಅವರು ಇದೀಗ ಫೋಟೊವೊಂದನ್ನು ಶೇರ್ ಮಾಡಿ ಕುತೂಹಲ ಹುಟ್ಟಿಸಿದ್ದಾರೆ.

ಕಳೆದ ತಿಂಗಳು ನಿರ್ದೇಶಕ ತರುಣ್ ಸುಧೀರ್ ಅವರನ್ನು ಕೈ ಹಿಡಿದ ಸೋನಲ್ ಅವರು ಇದೀಗ ಹಸಿರು ಸೀರೆಯುಟ್ಟು, ಕೈತುಂಬಾ ಹಸಿರು ಬಳೆ ಧರಿಸಿ ಪೋಟೋಗೆ ಫೋಸ್ ನೀಡಿದ್ದಾರೆ. ಇದು ಅವರ ಮದುವೆ ಸಂದರ್ಭದ ಬಳೆ ಶಾಸ್ತ್ರದ ವೇಳೆ ತೆಗೆಸಿಕೊಂಡ ಫೋಟೋ ಆಗಿದೆ. ಫೋಟೋ ನೋಡಿದ ಅವರ ಅಭಿಮಾನಿಗಳು, ತರುಣ್‌ರೊಂದಿಗೆ ನೂರು ಕಾಲ ಚೆನ್ನಾಗಿ ಬಾಳಿ ಎಂದು ಹಾರೈಸಿದ್ದಾರೆ.  

ಮತ್ತೊಬ್ಬರು ಹೆಣ್ಣು ಅಂದರೆ ನಿಮ್ಮ ತರಹ ಲಕ್ಷಣವಾಗಿರಬೇಕೆಂದು ಕಮೆಂಟ್ ಮಾಡಿದ್ದಾರೆ.

ಸೋನಲ್ ಹಾಗೂ ತರುಣ್ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾದರು.  ಇದೀಗ ಮದುವೆಯ ಸಂಭ್ರಮಗಳ ಒಂದೊಂದೇ ನೆನಪುಗಳನ್ನ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಸೋನಲ್.

ಕೆಲವೇ ದಿನದ ಹಿಂದೆ ಮೆಹಂದಿ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿದ್ದ ಸೋನಲ್ ಈಗ ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಐಂದ್ರಿತಾ ರೇ