Select Your Language

Notifications

webdunia
webdunia
webdunia
webdunia

ರೋಸ್ ಸಂಭ್ರಮದಲ್ಲಿ ಮಿರ ಮಿರ ಮಿಂಚಿದ ತರುಣ್ ಸುಧೀರ್- ಸೋನಾಲ್

Sonal Tarun Sudhir

Sampriya

ಮಂಗಳೂರು , ಶನಿವಾರ, 31 ಆಗಸ್ಟ್ 2024 (20:01 IST)
Photo Courtesy X
ಮಂಗಳೂರು: ಆ 11ರಂದು ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹ ಸಮಾರಂಭದಲ್ಲಿ ನಟಿ ಸೋನಲ್‌ರನ್ನು ಕೈಹಿಡಿದ ತರುಣ್ ಅವರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಾಳೆ ಮಂಗಳೂರಿನಲ್ಲಿನಡೆಯಲಿದೆ.  

ಇಂದು ಸೋನಾಲ್ ಅವರ ರೋಸ್ ಕಾರ್ಯಕ್ರಮ ತುಂಬಾನೇ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ಸೋನಾಲ್ ಕುಟುಂಬದವರು ಭಾಗಿಯಾಗಿ, ಕುಣಿದು ಕುಪ್ಪಳಿಸಿದರು. ಇನ್ನೂ ತರುಣ್ ಹೊಸ ಹೇರ್‌ಸ್ಟೈಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯಲ್ಲಿದ್ದ ಉದ್ದ ಕೂದಲಿಗೆ ತರುಣ್ ಸುಧೀರ್ ಕತ್ತರಿ ಹಾಕಿ, ನ್ಯೂ ಲುಕ್‌ನಲ್ಲಿ ಪೋಸ್ ನೀಡಿದ್ದಾರೆ.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಾಲ್ ಮಂಥೆರೋ ಅವರು ಕ್ರಿಶ್ಚಿಶನ್ ಸಮುದಾಯಕ್ಕೆ ಸೇರಿದವರು. ತುಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸೋನಾಲ್ ಅವರು ನಂತರ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಯಾದರು. ದರ್ಶನ್ ಅವರ ರಾಬರ್ಟ್ ಸಿನಿಮಾದ ಮೂಲಕ ಪರಿಚಯವಾದ ಸೋನಾಲ್ ಹಾಗೂ ತರುಣ್ ಅವರ ಗೆಳೆತನ, ಪ್ರೀತಿಗೆ ತಿರುಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಮ್ಮ ಪ್ರೀತಿಗೆ, ದಾಂಪತ್ಯ ಜೀವನಕ್ಕೆ ಜಾತಿ ಸಂಪ್ರದಾಯ ಅಡ್ಡಿ ಬರಲ್ಲ. ಹಿಂದೂ ಸಂಪ್ರದಾಯದಂತೆ ಮದುವೆ ನಡೆದ ಬೆನ್ನಲ್ಲೇ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೇ ಮದುವೆಯಾಗುತ್ತೇವೆ ಎಂದು ತರುಣ್ ಹೇಳಿದ್ದರು. ಈ ಹಿಂದೆಯೂ ತರುಣ್  ಹೇಳಿದಂತೆ ಇದೀಗ ನಾಳೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮದುವೆಯಾಗಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿ ಕೃಷ್ಣ ಮಠಕ್ಕೆ ಜೂ.ಎನ್‌ಟಿಆರ್‌ ಭೇಟಿ : ಇದೇ ತಾಯಿಯ ಬರ್ತಡೇಗೆ ಸ್ಪೆಷಲ್ ಗಿಫ್ಟ್‌