Publish Date: Sun, 22 May 2022 (17:17 IST)
Updated Date: Sun, 22 May 2022 (17:18 IST)
ತಿರುವನಂತಪುರಂ: ಖ್ಯಾತ ಹಿನ್ನಲೆ ಗಾಯಕಿ ಸಂಗೀತಾ ಸಜಿತ್ ಕಿಡ್ನಿ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಮಲಯಾಳಂ ಮೂಲದ ಗಾಯಕಿ ಕನ್ನಡ, ತೆಲುಗು, ತಮಿಳಿನಲ್ಲೂ ಹಾಡಿದ್ದರು. 200 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಅವರದ್ದಾಗಿದೆ.
ತಿರುವನಂತರಪುರಂನ ತಮ್ಮ ಸಹೋದರಿ ಮನೆಯಲ್ಲಿ ಸಂಗೀತಾ ಅಸುನೀಗಿದ್ದಾರೆ. ಕಳೆದ ಕೆಲವು ಸಮಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.